`ವಿಶ್ವ ಪರಿಸರ ದಿನ’ ವಿಶೇಷ ಆಚರಣೆಗೆ ನಿರ್ಧಾರ

`ವಿಶ್ವ ಪರಿಸರ ದಿನ’  ವಿಶೇಷ ಆಚರಣೆಗೆ ನಿರ್ಧಾರ

ದಾವಣಗೆರೆ, ಜೂ. 8- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ಕರ್ನಾಟಕ), ಜಿಲ್ಲಾ ಸಂಸ್ಥೆ (ದಾವಣಗೆರೆ) ವತಿಯಿಂದ ಡಿಆರ್ಆರ್ ಸ್ಕೌಟ್  ಭವನದಲ್ಲಿ ಜಿಲ್ಲಾ ಮಟ್ಟದ ರೋವರ್ ಸ್ಕೌಟ್ ಲೀಡರ್ಸ್ ಮತ್ತು ರೇಂಜರ್ಸ್ ಲೀಡರ್ಸ್ ಗಳ ಸಭೆಯನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಚಿಗಟೇರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

2024-25 ನೇ ಸಾಲಿನ ಘಟಕ, ಘಟಕಗಳನ್ನು ಹೆಚ್ಚಿಸಿ ತರಬೇತಿ ನೀಡುವುದು, ಸೇವಾ ಕಾರ್ಯ ಚಟುವಟಿಕೆ, ನಿಪುನ್ ಪರೀಕ್ಷೆ , ಪದಕ ತರಬೇತಿ, ಚಾರಣ ಶಿಬಿರ ಆಯೋಜನೆ, ವಾರ್ಷಿಕ ಚಟುವಟಿಕೆಗಳು, ವಿಶ್ವ ಪರಿಸರ ದಿನಾಚರಣೆಯನ್ನು ರೇಂಜೆರ್ಸ್ ಮತ್ತು ರೋವರ್ಸ್ ಒಳಗೊಡಂತೆ ಈ ಬಾರಿ ತುಂಬಾ ವಿಶೇಷವಾಗಿ ಆಚರಿಸುವ ಬಗ್ಗೆ  ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಮುಖ್ಯ ಆಯುಕ್ತರು ಎಲ್ಲರೊಂದಿಗೆ ಚರ್ಚಿಸಿ ಮಾಹಿತಿಯನ್ನು ನೀಡಿದರು. ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಕ್ಷರಪ್ಪ, ಜಿಲ್ಲಾ ಗೈಡ್ ಆಯುಕ್ತರಾದ ಶಾರದಾ ಮಾಗಾನಹಳ್ಳಿ, ಸಹಾಯಕ ಜಿಲ್ಲಾ ಆಯುಕ್ತ ಎನ್.ಕೆ. ಕೊಟ್ರೇಶ್, ಜಿಲ್ಲಾ ಕಾರ್ಯದರ್ಶಿ ಎಂ ರತ್ನ, ಜಿಲ್ಲಾ ಸಹ ಕಾರ್ಯದರ್ಶಿ  ಸುಖವಾನಿ  ಅವರುಗಳು ಅನೇಕ ವಿಷಯಗಳ ಬಗ್ಗೆ  ಚರ್ಚಿಸಿದರು. 

ರೋವರ್ ಸ್ಕೌಟ್ ಲೀಡರ್ ಮತ್ತು ರೇಂಜರ್ ಲೀಡರ್ಸ್ ಅವರು ಮುಖ್ಯ ಆಯುಕ್ತರಿಂದ ಮತ್ತು ಪದಾಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಂಡರು. ಅಶ್ವಿನಿ ಎಸ್. ಜಿ. ವಿ. ನಿರೂಪಿಸಿದರು.

error: Content is protected !!