ಕೊಮಾರನಹಳ್ಳಿ : ಸ್ವಂತ ಹಣದಲ್ಲಿ ನೀರಿನ ಸೌಲಭ್ಯ ಕಲ್ಪಿಸಿದ ಬಸವರಾಜ್

ಕೊಮಾರನಹಳ್ಳಿ : ಸ್ವಂತ ಹಣದಲ್ಲಿ  ನೀರಿನ ಸೌಲಭ್ಯ ಕಲ್ಪಿಸಿದ ಬಸವರಾಜ್

ಮಲೇಬೆನ್ನೂರು, ಜು. 8 – ಕೊಮಾರನಹಳ್ಳಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹಾಲಿವಾಣ ಗ್ರಾ. ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಡಿವಾಳರ ಬಸವರಾಜ್ ಅವರು ತಮ್ಮ ಸ್ವಂತ ಹಣದಲ್ಲಿ ಸೋಮವಾರ ಬೋರ್ ಹಾಕಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. 

ಈ ವೇಳೆ ಆಗಮಿಸಿದ್ದ ಶಾಸಕ ಬಿ.ಪಿ. ಹರೀಶ್ ಅವರು ಮಡಿವಾಳರ ಬಸವರಾಜ್ ಅವರ ಮಾನವೀಯ ಸೇವೆಯನ್ನು ಕೊಂಡಾಡಿದರು. ಬೋರ್ ವೆಲ್‌ನಲ್ಲಿ ಸುಮಾರು 2 ಇಂಚು ನೀರು ಬಿದ್ದಿದೆ ಎಂದು ಬಸವರಾಜ್ ತಿಳಿಸಿದರು. 

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಸ್.ಹೆಚ್. ಹಾಲೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಪಿ.ಟಿ. ಪರಮೇಶ್ ನಾಯ್ಕ್, ರಾಮಣ್ಣ ಸ್ವಾಮಿ, ಸಿ. ರಂಗಣ್ಣ, ಮಂಜುನಾಥ್,  ಹರೀಶ್, ಜಿ.ಸುನೀಲ್ ಹಾಜರಿದ್ದರು.

error: Content is protected !!