ಹರಪನಹಳ್ಳಿ ವಾಲ್ಮೀಕಿ ಸಮಾಜದಿಂದ ಲೋಕಸಭಾ ಸದಸ್ಯೆ ಪ್ರಿಯಾಂಕಗೆ ಸನ್ಮಾನ

ಹರಪನಹಳ್ಳಿ ವಾಲ್ಮೀಕಿ ಸಮಾಜದಿಂದ ಲೋಕಸಭಾ ಸದಸ್ಯೆ ಪ್ರಿಯಾಂಕಗೆ ಸನ್ಮಾನ

ಹರಪನಹಳ್ಳಿ, ಜೂ. 23- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರನ್ನು  ಹರಪನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ  ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ,  ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ,  ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಟಿ.ವನಜಾಕ್ಷಮ್ಮ, ಕಾರ್ಯದರ್ಶಿ ಲಕ್ಷ್ಮಿ ಚಂದ್ರಶೇಖರ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಸಮಾಜದ ಉಪಾಧ್ಯಕ್ಷ ಮಂಡಕ್ಕಿ ಸುರೇಶ್, ಕಾರ್ಯದರ್ಶಿ ಜಿಟ್ಟಿನಕಟ್ಟಿ ಹೆಚ್.ಕೆ.ಮಂಜುನಾಥ, ಯಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ  ರಾಮಪ್ಪ, ನಿವೃತ್ತ ಮುಖ್ಯ ಶಿಕ್ಷಕ ಅಂಜಿನಪ್ಪ. ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ  ಕಂಚಿಕೇರಿ ಜಯಲಕ್ಷ್ಮಿ, ಮುಖಂಡರಾದ ತೆಲಿಗಿ ಅಂಜಿನಪ್ಪ. ಶಿವಣ್ಣ, ದಾದಾಪುರ ಯೋಗೇಶ. ಯಡಿಹಳ್ಳಿ ಮಂಜುಳಾ, ತೆಲಿಗಿ ಶೋಭಾ, ಹುಚ್ಚಮ್ಮ ಸೇರಿದಂತೆ ಇತರರು ಇದ್ದರು.

error: Content is protected !!