ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಭೂಮೇಶ್‌ಗೆ ಬೀಳ್ಕೊಡುಗೆ

ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಭೂಮೇಶ್‌ಗೆ ಬೀಳ್ಕೊಡುಗೆ

ಹರಿಹರ, ಜೂ. 23-   ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಎ.ಕೆ. ಭೂಮೇಶ್ ಅವರು ವಯೋನಿವೃತ್ತಿ ಹೊಂದಿದ್ದು, ನಗರದ ಲಕ್ಷ್ಮಿ ಮಹಲ್ ಸಭಾಂಗಣದಲ್ಲಿ ಕಳೆದ ವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭೂಮೇಶ್ ಅವರನ್ನು ಆತ್ಮೀಯವಾಗಿ ಗೌರವಿಸುವುದರ ಮೂಲಕ ಬೀಳ್ಕೊಡಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಭೂಮೇಶ್ ಅವರ ವ್ಯಕ್ತಿತ್ವ ಮತ್ತು ಸಲ್ಲಿಸಿದ ಸೇವೆಯನ್ನು ಮೆಲಕು ಹಾಕಿದರು.  

ಸರ್ಕಾರಿ ನೌಕರರು ಇತ್ತೀಚಿನ ದಿನಗಳಲ್ಲಿ  ಕೆಲಸ ಮಾಡುವುದು ಕಷ್ಟವಾಗಿದೆ. ಕಾರಣ, ದಿನಕ್ಕೊಂದು ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಅವುಗಳನ್ನು ಪರಿಹರಿಸಲು ಸಾಕಷ್ಟು ಶ್ರಮ ವಹಿಸಬೇಕಾಗಿದೆ. ಕಚೇರಿಗೆ ಬರುವಂತ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಶಾಸಕರ ಆಪ್ತ ಸಹಾಯಕ ಹುದ್ದೆಯನ್ನು ನಿಭಾಯಿಸುವ ಕೆಲಸ ಅಷ್ಟೊಂದು ಸುಲಭವಲ್ಲ. ಶಾಸಕರ ಬಳಿ ಬಂದವರು ತಮ್ಮ ಕೆಲಸ, ಕಾರ್ಯಗಳು ಆಗದೇ ಇದ್ದಾಗ ಶಾಸಕರನ್ನು ದೂರುವ ಬದಲಾಗಿ ಆಪ್ತ ಸಹಾಯಕರನ್ನು ಹೆಚ್ಚು ದೂರುವುದನ್ನು ಕಾಣುತ್ತೇವೆ. ಅಂತ ಕಾಲ ಘಟ್ಟದಲ್ಲಿ  ಭೂಮೇಶ್ ಅವರು ಶಾಸಕರ ಆಪ್ತ ಸಹಾಯಕರಾಗಿಯೂ ಸಹ  ಪ್ರಾಮಾಣಿಕತೆಯಿಂದ ಸೇವೆಯನ್ನು ಮಾಡಿದ್ದಾರೆ ಎಂದು ಶಿವಶಂಕರ್ ಶ್ಲ್ಯಾಘಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಂಪಣ್ಣ  ಮಾತನಾಡಿ, ಯಾರು ಪಾಸಿಟಿವ್ ಚಿಂತನೆ ಅಡಿಯಲ್ಲಿ ಸಾಗುತ್ತಾರೋ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಗಳು ಬರುವುದಿಲ್ಲ,  ಭೂಮೇಶ್ ಅವರು ಈ ದಿಸೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭೂಮೇಶ್ ಅವರು,  1994 ರಲ್ಲಿ ಹರಿಹರ ತಾಲ್ಲೂಕಿಗೆ ಬಂದು ಅನೇಕ ವರ್ಷಗಳ ಕಾಲ ಜಾನುವಾರು ಇಲಾಖೆಯ ಮೂಲಕ ಸೇವೆ ಸಲ್ಲಿಸಿರುವೆ. ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವಂತಹ ಸೌಭಾಗ್ಯ ನನಗೆ ದೊರೆಯಿತು ಎಂದು ಸಂತಸ ವ್ಯಕ್ತಪಡಿಸಿದರು.  

ಈ ವೇಳೆ ಶಾಸಕ ಬಿ.ಪಿ. ಹರೀಶ್ ಅವರು  ಭೂಮೇಶ್ ಅವರನ್ನು ಸನ್ಮಾನಿಸಿ, ಗೌರವಿಸುವುದರೊಂದಿಗೆ, ಅವರು ತಮ್ಮ ಬಳಿ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡರಾದ ಡಿ.ಕುಮಾರ್, ಮಂಜುನಾಥ್ ಪಾಟೀಲ್, ಜಿಗಳಿ ಆನಂದಪ್ಪ, ಎಂ.ಬಿ. ಅಣ್ಣಪ್ಪ, ಪಿ.ಜೆ.‌ ಮಹಾಂತೇಶ್, ಹೆಚ್.ಕೆ. ಕೊಟ್ರಪ್ಪ, ಜೆಡಿಎಸ್‌ನ  ಹೆಚ್.ನಿಜಗುಣ, ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ವಿಜಯ ಮಹಾಂತೇಶ್, ಬಿಇಓ ಹನುಮಂತಪ್ಪ, ಸಿ.ಆರ್.ಪಿ. ಬಸವರಾಜಯ್ಯ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಎಂ. ಉಮ್ಮಣ್ಣ, ಎಂ.ವಿ. ಹೊರಕೇರಿ, ರೇವಣಸಿದ್ದಪ್ಪ ಅಂಗಡಿ, ಶರಣ್ ಕುಮಾರ್, ಬಿ.ವಿ. ಕೊಟ್ರೇಶ್, ಸಂಗಣ್ಣ ಕರಡಿ, ಶಿವಮೂರ್ತಿ, ಡಾ ಸಿದ್ದೇಶ್, ಮಂಜುನಾಥ್, ಸಂತೋಷ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!