ಮಲ್ಲಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಮಲ್ಲಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ, ಜೂ. 21 – ತಾಲ್ಲೂಕಿನ ಆಲೂರು ಗ್ರಾ.ಪಂ. ವ್ಯಾಪ್ತಿಯ ಮಲ್ಲಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ನಿನ್ನೆ ಭೇಟಿ ನೀಡಿದ್ದರು.

ಗ್ರಾಮದಲ್ಲಿ ಇರುವ ಸರ್ವೆ ನಂಬರ್ 7/1 ರಲ್ಲಿ ಇರುವ 6 ಎಕರೆ ವಿಸ್ತೀರ್ಣದ ಜಾಗದಲ್ಲಿ ಕೆರೆಯನ್ನು ಅಗಲಿಕರಣ ಮಾಡಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಲ್ಲು ಪಿಚ್ಚಂಗ್ ಮಾಡಿ ಕೆರೆಯನ್ನು ಅಭಿವೃದ್ಧಿ ಮಾಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಭರವಸೆಯನ್ನು ‌ನೀಡಿದರು. 

ಮುಂದಿನ ದಿನಗಳಲ್ಲಿ ಮಲ್ಲಾಪುರ ಗ್ರಾಮದಲ್ಲಿ ಜನತಾದರ್ಶನ ಕಾರ್ಯಕ್ರಮನ್ನು ಮಾಡುವುದಾಗಿ ಅಧಿಕಾರಿಗಳು ಮತ್ತು ಗ್ರಾಮಸ್ಥರಿಗೆ ತಿಳಿಸಿದರು. 

ಕೆರೆಯನ್ನು ಇನ್ನು  ಸರಿಯಾಗಿ ಸರ್ವೆಯನ್ನು ಮಾಡಿಸಿ ಕೆರೆಯನ್ನು ಇನ್ನು ಅಗಲ ಮಾಡುವಂತೆ ತಹಶೀಲ್ದಾರ್‌ ಡಾ. ಅಶ್ವತ್ಥ್‌ ಅವರಿಗೆ ಸೂಚಿಸಿದರು. ಮುಂದಿನ ವಾರ ಸರ್ವೆಯನ್ನು ಮಾಡಿಸಿ ವರದಿಯನ್ನು ಕೊಡುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ  ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಸಿ. ನಾಗರಾಜ, ಡಿ.ಜಿ. ಬಸವರಾಜ್, ಕಂದಾಯ ಇಲಾಖೆಯ ರಾಜಸ್ವ ನೀರಿಕ್ಷಕ ಸಿದ್ದೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಮಲ್ಲಿಕಾರ್ಜುನ್, ಗ್ರಾ.ಪಂ. ಪಿಡಿಓ ಎಸ್.ಬಿ.ನಿಂಗಣ್ಣ, ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!