ಶಾಲಾ-ಕಾಲೇಜುಗಳಲ್ಲಿ ಯೋಗಾಭ್ಯಾಸ ಅಗತ್ಯ

ಶಾಲಾ-ಕಾಲೇಜುಗಳಲ್ಲಿ ಯೋಗಾಭ್ಯಾಸ ಅಗತ್ಯ

ಹರಿಹರ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ ಹರೀಶ್

ಹರಿಹರ, ಜೂ. 21- ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಯಲ್ಲಿ ವಾರದಲ್ಲಿ ಒಂದಷ್ಟು ದಿನ ಯೋಗಾಭ್ಯಾಸ ಮಾಡಿಸುವಂತಹ ವ್ಯವಸ್ಥೆ  ನಿಗದಿ ಮಾಡಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಹಾಗೂ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯ ಗಳು ಮತ್ತು ಧನ್ವಂತರಿ ಪತಂಜಲಿ ಯೋಗ ಕೇಂದ್ರ ಹರಿಹರ ಹಾಗೂ ಎನ್.ಎಸ್.ಎಸ್.ಘಟಕಗಳು ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸನಾತನ ಪರಂಪರೆಯ ಯೋಗವು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಭಾರ ತದಲ್ಲಿ   ಋಷಿ ಮುನಿಗಳ ಕಾಲದಿಂದಲೂ ಯೋಗ ಅಭ್ಯಾಸ ನಡೆದುಕೊಂಡು ಬಂದಿದೆ. ಅದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳ ಹಿಂದೆ ವಿಶ್ವಕ್ಕೆ ಯೋಗವನ್ನು ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದ್ದು, ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ ಎಂದರು.

ಮೋದಿಯವರು ಯೋಗದಿಂದ ಆಗು ವಂತಹ ಲಾಭವನ್ನು ವಿಶ್ವಕ್ಕೇ ಪರಿಚಯ ಮಾಡಿಕೊಟ್ಟ ಪರಿಣಾಮವಾಗಿ, ಇಂದು ವಿಶ್ವದ ಅನೇಕ ದೇಶಗಳಲ್ಲಿ ಯೋಗ ದಿನಾಚರಣೆ  ಮಾಡುವಂತೆ ಪ್ರೇರೇಪಿಸಿತು. ಜೊತೆಗೆ ವಿಶ್ವಕ್ಕೆ ಭಾರತದ ಸಂಸ್ಕಾರ, ಪರಂಪರೆಯ ಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬುದು ಕೂಡ ಸಾಬೀತು ಆಯಿತು ಎಂದು ಹೇಳಿದರು.

ಪ್ರತಿನಿತ್ಯ ಯೋಗ ಮಾಡುವುದರಿಂದ ದೇಹದ ಮನಸ್ಥಿತಿ ಸ್ಥಿರತೆಯನ್ನು ಹೊಂದಿರುತ್ತದೆ. ಆರೋಗ್ಯದಲ್ಲಿ ದುಷ್ಪರಿಣಾಮ ಬೀರುವುದನ್ನು ನಿಯಂತ್ರಣ ಮಾಡುತ್ತದೆ. ಮನಸ್ಸು ಲವಲವಿಕೆಯಿಂದ ಕೂಡಿರುತ್ತದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಬೆಳಗ್ಗೆ ಒಂದು ಗಂಟೆ  ಕಾಲ ಯೋಗ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. 

ಈ ವೇಳೆ ಬಾಲಕಿ  ಎನ್. ಸಾನ್ವಿ   ಮಾಡಿದ ಯೋಗ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಾಚಾರ್ಯ ಡಾ.ಜಿ.ಬಿ.ಗಂಗಾಧರಪ್ಪ,   ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಪ್ರೊ. ಸುಜಾತ, ಪತ್ರಕರ್ತ  ಎಂ. ಚಿದಾನಂದ ಕಂಚಿಕೇರಿ, ಎನ್.ಎಸ್.ಎಸ್. ಘಟಕದ ಕಾರ್ಯಕ್ರಮ ಅಧಿಕಾರಿ ಹೆಚ್.ಎಂ.ಗುರುಬಸವರಾಜಯ್ಯ, ಧನ್ವಂತರಿ ಯೋಗ ಕೇಂದ್ರದ ಎನ್. ನಿರಂಜನ್, ಎನ್ ಮೀನಾಕ್ಷಿ ,   ಕರಿಬಸಪ್ಪ ಕಂಚಿಕೇರಿ. ವಿನಾಯಕ ಆರಾಧ್ಯಮಠ, ಕಾಂತರಾಜ್ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!