ಬಾಪೂಜಿ ಬಿಕಾಂ ಕಾಲೇಜಿನಲ್ಲಿ ಪರಿಸರ ದಿನ

ಬಾಪೂಜಿ ಬಿಕಾಂ ಕಾಲೇಜಿನಲ್ಲಿ ಪರಿಸರ ದಿನ

ದಾವಣಗೆರೆ, ಜೂ. 20- ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಷನ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.

ನಗರ ಪಾಲಿಕೆ ನೌಕರರೊಂದಿಗೆ ಪರಿಸರ ಸ್ವಚ್ಛತಾ ಕಾರ್ಯವನ್ನು ವಿಶ್ವೇ ಶ್ವರಯ್ಯ ಪಾರ್ಕ್ ಮತ್ತು ವಾಟರ್ ಟ್ಯಾಂಕ್‌ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ಆಹಾರ ತಂತ್ರಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಬಿ. ವೀರೇಶ್ ಉಪಸ್ಥಿತರಿದ್ದರು.

ಬಿಐಹೆಚ್ಇ ಪ್ರಾಂಶುಪಾಲ ಡಾ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಉಪಸ್ಥಿತರಿದ್ದರು.

error: Content is protected !!