ಸೇಂಟ್ ಜಾನ್ಸ್ ಶಾಲೆಯಲ್ಲಿ 154 ನೇ ಕದಳಿ ಕಮ್ಮಟ

ಸೇಂಟ್ ಜಾನ್ಸ್ ಶಾಲೆಯಲ್ಲಿ 154 ನೇ ಕದಳಿ ಕಮ್ಮಟ

ಕುರುಬ ಗೊಲ್ಲಾಳೇಶ್ವರ ಸಂಸ್ಮರಣೆ

ದಾವಣಗೆರೆ, ಜೂ. 17 – 154 ನೇ ಕದಳಿ ಕಮ್ಮಟ, ಕುರುಬ ಗೊಲ್ಲಾಳೇಶ್ವರ ಸಂಸ್ಮರಣೆ ಹಾಗೂ ಲಿಂ. ಕೆ.ಜಿ. ಕಲ್ಲಪ್ಪ, ಲಿಂ. ಕೆ.ಜಿ. ಲೋಕೇಶ್ವರಮ್ಮ ದತ್ತಿ ಕಾರ್ಯಕ್ರಮವು ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಸೆಂಟ್ ಜಾನ್ಸ್ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಗಾಯತ್ರಿ ವಸ್ತ್ರದ್ ವಹಿಸಿದ್ದರು. ದತ್ತಿಯ ಅನುಭಾವಿಗಳಾಗಿ ಜಿ.ಎನ್. ರೂಪಾ ಶರಣರಲ್ಲಿ ಪರಿಸರ ಜಾಗೃತಿ ಎಂಬ ವಿಷಯದ ಕುರಿತಾಗಿ ಮಾತನಾಡಿದರು.

ಶಾಲೆಯ ಕಾರ್ಯದರ್ಶಿ ಉಮಾಪತಯ್ಯ ತಮ್ಮ ಶಾಲೆಯ ಮಕ್ಕಳಿಗೆ ಪರಿಸರವನ್ನು ಮುಂದಿನ ಪೀಳಿಗೆಗೆ ಯಾವ ರೀತಿ ಉಳಿಸಿ ಕೊಂಡು ಹೋಗಬೇಕು ಎನ್ನುವುದರ ಬಗ್ಗೆ ತುಂಬಾ ಮೌಲ್ಯಯುತವಾದ  ಸಲಹೆಗಳನ್ನು ನೀಡಿದರು. 

ಅಲ್ಲದೆ,  ಇನ್ನು ಮುಂದೆ ಶಾಲೆಯ ಯಾವ ಕಾರ್ಯಕ್ರಮಗಳಿಗೂ ಪ್ಲಾಸ್ಟಿಕ್ ಬಾಟಲ್ ಬಳಕೆ ಮಾಡಬಾರದೆಂದು ಅಲ್ಲಿನ ಪ್ರಾಂಶುಪಾಲರಿಗೆ ಸಂದೇಶ ನೀಡಿದರು.  

ಇದೇ ಸಂದರ್ಭದಲ್ಲಿ ಕದಳಿ ವೇದಿಕೆಯ ತಾಯಂದಿರು ಎಂತೆಂಥಾ ಸಮಾಜಮುಖಿ ಕೆಲಸ ಗಳನ್ನು ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ದತ್ತಿ ದಾನಿಗಳ ಪರವಾಗಿ ಕೆ.ಜಿ.ಬಸವರಾಜ್ ಆಗಮಿಸಿ ದತ್ತಿಯ ಬಗ್ಗೆ ಹಾಗೂ ವೇದಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮಕ್ಕಳಿಗೆ ವಚನ ಹಾಗೂ ಶರಣರ ವಚನಗಳ ಅಂಕಿತನಾಮ ಬರವಣಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಿವ ತಂಡದ ಗೆಳತಿಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು.

ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ವಿನೋದ ಅಜಗಣ್ಣ, ತಾಲ್ಲೂಕು ಘಟಕದ ಅಧ್ಯಕ್ಷೆ ಮಮತಾ ನಾಗರಾಜ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪರಮೇಶ್ವರಪ್ಪ, ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಖಜಾಂಚಿ ಪ್ರವೀಣ್ ಹುಲ್ಮನಿ, ಕೇಂದ್ರ ಪಠ್ಯಕ್ರಮದ ಪ್ರಾಂಶುಪಾಲ ಸೈಯದ್ ಆರೀಫ್, ರಾಜ್ಯ ಪಠ್ಯಕ್ರಮದ ಪ್ರಾಂಶುಪಾಲರಾದ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲರಾದ ಎಸ್.ಎಂ. ನೇತ್ರಾವತಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಣಿ ರಾಜ್ ದತ್ತಿ ದಾನಿಗಳನ್ನು ಪರಿಚಯಿಸಿದರು. ಅನುಭಾವಿಗಳ ಪರಿಚಯವನ್ನು ಚಂದ್ರಿಕಾ ಮಂಜುನಾಥ್, ಬಹುಮಾನ ಪ್ರಕಟಣೆಯನ್ನು ರತ್ನಾ ರೆಡ್ಡಿ ನೆರವೇರಿಸಿದರು.

ಲಕ್ಷ್ಮಿ ಮಲ್ಲಿಕಾರ್ಜುನ ಸ್ವಾಗತಿಸಿದರು.  ಸೌಮ್ಯ ಸತೀಶ್ ವಂದಿಸಿದರು. ನಿರ್ಮಲ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!