ದಾವಣಗೆರೆ ಜೂ 17- ತ್ಯಾಗ ಹಾಗೂ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ನಗರದ್ಯಾಂತ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಾರ್ಥನೆಯಾದ ” ಈದ್ -ಉಲ್-ಆಜಹ ” ಬೆಳಿಗ್ಗೆ 9-30ಕ್ಕೆ ಸರಿಯಾಗಿ ಪಿ.ಬಿ. ರಸ್ತೆಯಲ್ಲಿರುವ ಹಳೇ ಈದ್ಗಾ, ರಜಾಉಲ್ ಮುಸ್ತಾಫ ನಗರದಲ್ಲಿರುವ ಹೊಸ ಈದ್ಗಾ ಹಾಗೂ ಎಸ್. ಓ. ಜಿ. ಕಾಲೋನಿಯಲ್ಲಿರುವ ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಸೇರಿ ನಮಾಜ್ ಸಲ್ಲಿಸಿದರು.
ಬಕ್ರೀದ್ ಹಬ್ಬದ ವಿಶೇಷವೆಂದರೆ ಬಲಿದಾನ (ಕುರ್ಬಾನಿ) ಮಾಡುವುದು ಮೂರು ಭಾಗವನ್ನಾಗಿ ವಿಂಗಡಿಸಿ ಒಂದು ಸ್ವಂತಕ್ಕೆ, ಎರಡು ಸಂಬಂಧಿಕರಿಗೆ, ಹಾಗೂ ಮೂರು ನೇಯದಾಗಿ ಬಡವರಿಗೆ ನಿಗ೯ತಿಕರಿಗೆ ಮಾಂಸವನ್ನು ಹಂಚಿಕೆ ಮಾಡಿ ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡರು.
ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಬ್ಬದ ಪ್ರಾರ್ಥನೆಯನ್ನು ಬೋಧಿಸಿದ ಮೌಲಾನಾ ಸೈಯದ್ ನಸೀರ್ ಆಹ್ಮದ್ ಮಿಸ್ಬಾಯಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪೋಷಕರು ಮುಂದಾಗಬೇಕು ಸಾಮಾಜಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ಯುವ ಪೀಳಿಗೆ ದುಶ್ಚಟಕ್ಕೆ ಬಲಿಯಾಗುತ್ತದೆ ಇದರ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು ಎ೦ದು ಕರೆ ನೀಡಿದರು.
ಬಕ್ರೀದ್ ಹಬ್ಬವು ಸಮಸ್ತ ಬಾಂಧವರಿಗೆ ಸುಖ ಶಾಂತಿ, ಸಮೃದ್ಧಿ, ಸಹಬಾಳ್ವೆಗೆ ನಾಂದಿಯಾಗಲಿ ಎಂದು ದುವಾ ಮಾಡಿ ಶುಭಾಶಯಕೋರಿದರು.
ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರು ಮಾತನಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಶಿಕ್ಷಣ ಬಹಳ ಅವಶ್ಯ ಎಂದು ಬಕ್ರೀದ್ ಹಬ್ಬದ ಶುಭಕೋರಿದರು.
ತಂಜೀಮ್ ಸಮಿತಿ ಅಧ್ಯಕ್ಷ ದಾದಾಪೀರ್ (ದಾದು ಶೇಠ್ ) ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.