ಶಾಂತಿ, ಸೌಹಾರ್ದಯುತವಾಗಿ ಬಕ್ರೀದ್‌ ಆಚರಿಸಿ

ಶಾಂತಿ, ಸೌಹಾರ್ದಯುತವಾಗಿ ಬಕ್ರೀದ್‌ ಆಚರಿಸಿ

ಮಲೇಬೆನ್ನೂರು : ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರಭು ಮನವಿ 

ಮಲೇಬೆನ್ನೂರು, ಜೂ.16- ನಾಳೆ ಸೋಮವಾರ ಜರುಗುವ ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಿ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಪಟ್ಟಣದ ಮುಸ್ಲಿಂ ಜನತೆಗೆ ಮನವಿ ಮಾಡಿದರು.

ಅವರು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾರ್ಥನಾ ಸಭೆ, ಮೆರವಣಿಗೆ ವೇಳೆ ಪೊಲೀಸ್‌ ಇಲಾಖೆ ಭದ್ರತೆ ಒದಗಿಸುತ್ತದೆ. ಪ್ರಾಣಿಬಲಿ ನೀಡಬಾರದು, ಸಂಚಾರ ವ್ಯವ ಸ್ಥೆಗೆ ಧಕ್ಕೆ ಆಗದಂತೆ ಎಚ್ಚರ ವಹಿಸಿ ಎಂದರು. 

ದ್ವಿಚಕ್ರ ವಾಹನದಲ್ಲಿ 3 ಜನರು ಸಾಗುವುದು, ಸ್ವಚ್ಛತೆ ಪಾಲಿಸದಿರುವುದು, ಸಾಮಾಜಿಕ ಜಾಲತಾಣದಲ್ಲಿ ಕುಚೋದ್ಯದ ಸಂದೇಶ ರವಾನಿಸಿದರೆ, ಶಾಂತಿ ಕದಡಿದರೆ, ಕಾನೂನು ರೀತ್ಯಾ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪಿಎಸ್ಐ ಪ್ರಭು ನೀಡಿದರು.

ಮುಸ್ಲಿಂ ಸಮಾಜದ ಮುಖಂಡ ಸೈಯದ್‌ ಜಾಕೀರ್‌, ಪುರಸಭೆ ಸದಸ್ಯ ದಾದಾಪೀರ್‌, ನಯಾಜ್‌ ಮಾತನಾಡಿ, ತ್ಯಾಗ – ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು 3 ದಿನ ಆಚರಣೆ ಮಾಡಲಾಗುವುದು. ಪ್ರಾರ್ಥನಾ ಸಭೆ, ಮೆರವಣಿಗೆ ವೇಳೆ ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು. ಸ್ವಚ್ಛತೆ,  ಶಾಂತಿ ಕಾಪಾಡುವ ಭರವಸೆ ನೀಡಿದರು.

ಪಿಎಸ್ಐ ಮಹಾದೇವ್‌, ಭಾನುವಳ್ಳಿ ಮುಸ್ಲಿಂ ಸಮಾಜದ ಮುಖಂಡ ಹಜರತ್‌ ಅಲಿ ಮಾತನಾಡಿದರು.

ಇಕ್ಬಾಲ್‌ ಸಾಬ್‌, ಪುರಸಭೆ ಸದಸ್ಯ ಶಬ್ಬೀರ್, ಜಮೀರ್ ಪಾಷಾ, ಅನ್ವರ್‌ ಭಾಷಾ ಗೌಸ್‌ಪೀರ್, ಶಾಕೀರ್‌, ಅನ್ವರ್‌ ಭಾಷಾ, ವಿವಿಧ ಮಸೀದಿಗಳ ಮುತುವಲಿಗಳು, ಭಾನುವಳ್ಳಿ, ಕಡರನಾಯಕನಹಳ್ಳಿ, ಮಲ್ಲನಾಯಕನಹಳ್ಳಿ, ಗೋವಿನಹಾಳು ಗ್ರಾಮದ ಮುಸ್ಲಿಂ ಸಮಾಜದ ಮುಖಂಡರು ಸಭೆಯಲ್ಲಿದ್ದರು.ಎಎಸ್ಐ ಶ್ರೀನಿವಾಸ್‌ ಸ್ವಾಗತಿಸಿ, ವಂದಿಸಿದರು.

error: Content is protected !!