ಪೌರ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಬೇಕು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಸಲಹೆ

ಪೌರ ಕಾರ್ಮಿಕರು  ಆರೋಗ್ಯ ಕಾಪಾಡಿಕೊಳ್ಳಬೇಕು  ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಸಲಹೆ

ಜಗಳೂರು, ಜೂ.13 –  ಪೌರ ಕಾರ್ಮಿಕರು ಸ್ವಚ್ಛತಾ ಸುರಕ್ಷಿತ ಕಿಟ್ ಧರಿಸಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು  ಎಂದು ಶಾಸಕ ಬಿ.ದೇವೇಂದ್ರಪ್ಪ ಸಲಹೆ ನೀಡಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ 34 ಜನ ಪೌರ ಕಾರ್ಮಿಕರಿಗೆ ಸಮವಸ್ತ್ರ, ಜರ್ಕಿನ್, ಶೂ ಸೇರಿದಂತೆ ಸುರಕ್ಷಿತ ಪರಿಕರ ವಿತರಿಸಿ ಮಾತನಾಡಿದರು.

ಪ್ರತಿನಿತ್ಯ ಬೆಳಿಗ್ಗೆ ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆ ಕಾರ್ಯ ದಲ್ಲಿ ತೊಡಗುವಾಗ ಹಾನಿಕಾರಕ ವಸ್ತುಗಳಿಂದ ಎಚ್ಚರ ವಹಿಸಬೇಕು. ಇಲಾಖೆಯಿಂದ ನೀಡುವ ಸುರಕ್ಷತಾ ಕಿಟ್‌ಗಳನ್ನು ಕಡ್ಡಾಯವಾಗಿ ಕೆಲಸ ನಿರ್ವಹಿಸುವಾಗ ಧರಿಸಬೇಕು‌‘ ಎಂದು ಹೇಳಿದರು.

‘ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾ ಗಿ ಸದಾ ಬದ್ದನಾಗಿ ರುವೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿ ಕರು ಪೌರ ಕಾರ್ಮಿಕರೊಂ ದಿಗೆ ಪಟ್ಟ ಣದ  ಸ್ವಚ್ಛತೆಗೆ ಸಹಕರಿಸ ಬೇಕು’ ಎಂದರು. ಈ ಸಂದ ರ್ಭದಲ್ಲಿ  ಪ.ಪಂ. ಮುಖ್ಯಾಧಿ ಕಾರಿ ಲೋಕ್ಯಾನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ನಿವೃತ್ತ ಉಪನ್ಯಾಸಕ ರಾಜಣ್ಣ, ಸುಭಾಷ್ ಚಂದ್ರಬೋಸ್, ಮುಖಂಡ ಅರ್ಜುನಪ್ಪ, ಕುರಿ ಜಯ್ಯಣ್ಣ, ಎಂ.ಎಸ್. ಪಾಟೀಲ್, ಪ.ಪಂ. ಆರೋಗ್ಯ ನಿರೀಕ್ಷಕ ಪ್ರಶಾಂತ ಕುಮಾರ್, ಪೌರ ಕಾರ್ಮಿಕರು ಇದ್ದರು.

error: Content is protected !!