ಎಸ್ಸೆಸ್ 94 : ಕಾಂಗ್ರೆಸ್‍ನಿಂದ ಗೋಶಾಲೆಗೆ ಮೇವು ವಿತರಣೆ

ಎಸ್ಸೆಸ್ 94 : ಕಾಂಗ್ರೆಸ್‍ನಿಂದ ಗೋಶಾಲೆಗೆ ಮೇವು ವಿತರಣೆ

ದಾವಣಗೆರೆ, ಜೂ. 13- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರ 94ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅವರ ನೇತೃತ್ವದಲ್ಲಿ ಆವರಗೆರೆಯಲ್ಲಿರುವ ಗೋಶಾಲೆ ಯಲ್ಲಿ ಗೋವುಗಳಿಗೆ ಮೇವು ಮತ್ತು ಸೌತೆಕಾಯಿಗಳನ್ನು ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಡಿಸಿಸಿ ಕಾರ್ಯದರ್ಶಿ  ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಮಂಗಳಮ್ಮ, ಮಂಜಮ್ಮ, ಶುಭಮಂಗಳ, ರಾಘವೇಂದ್ರಗೌಡ, ರಾಜು ಭಂಡಾರಿ, ವಿಜಯ ಕುಮಾರ್ ಜೈನ್, ಶ್ರೀಕಾಂತ್ ಬಗರೆ, ಯುವರಾಜ್, ಬಸವರಾಜ್, ರಾಕೇಶ್ ಡಿ.ಸಿ. ಮತ್ತಿತರರು ಉಪಸ್ಥಿತರಿದ್ದರು.

error: Content is protected !!