ಸ್ನೇಹಾ ಮಹಿಳಾ ಬಳಗದಿಂದ ಪರಿಸರ ದಿನಾಚರಣೆ

ಸ್ನೇಹಾ ಮಹಿಳಾ ಬಳಗದಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ. 12- ಸ್ನೇಹಾ ಮಹಿಳಾ ಬಳಗದ ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. 

ರಾಘವ ಐಕಾಂತಿಕ ಮುಖ್ಯ ಅತಿಥಿಗಳಾಗಿ ಆಗ ಮಿಸಿ ಸರಳ ಜೀವನ, ಸಹಜ ಕೃಷಿ ಹಾಗೂ ಆರೋಗ್ಯ ಪೂರ್ಣ ಸಮಾಜದತ್ತ ನಮ್ಮ ಕೊಡುಗೆ ಎಂಬ ವಿಷ ಯಗಳ ಬಗ್ಗೆ ಉತ್ತಮವಾದ ಮಾತುಗಳನ್ನಾಡಿದರು.

ಶ್ರೀಮತಿ ಮಂಜುಳಾ ನಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ನೇಹಾ ಮಹಿಳಾ ಬಳಗದ ಗೌರವ ಅಧ್ಯಕ್ಷ ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ನಾಗರತ್ನ ಮಹೇಶ್,  ತುಳಸಿ ಮಹೇಶ್,  ರಾಜೇಶ್ವರಿ,  ಲೀಲಾವತಿ,  ಜಯಶ್ರೀ,  ಸುಜಾತ,  ಅನ್ನಪೂರ್ಣ,  ರೇಖಾ,  ನೇತ್ರಾ,  ಉಮಾ,  ನರ್ಮದಾ,  ಪುಷ್ಪ, ಚೇತನಾ, ಅನುಸೂಯ ಮಲ್ಲೇಶ್ ಮತ್ತು ಅನೇಕ ಮಹಿಳೆಯರು ಭಾಗವಹಿಸಿದ್ದರು.

ಹೂವು, ಹಣ್ಣಿನ ಗಿಡಗಳ ಜೊತೆಗೆ ಕರಿಬೇವು, ನುಗ್ಗೆ, ಬೇವು ಮುಂತಾದ ಒಟ್ಟು 200 ಗಿಡಗಳನ್ನು ವಿತರಿಸಲಾಯಿತು. ಮಹಿಳೆಯರಿಗೆ ಆಟಗಳನ್ನಾಡಿಸಿ ಬಹುಮಾನ ವಿತರಿಸಲಾಯಿತು.

error: Content is protected !!