ಸಂತ ಪೌಲರ ಕಾಲೇಜಿನಿಂದ ಜಾಗೃತಿ ಜಾಥಾ

ಸಂತ ಪೌಲರ ಕಾಲೇಜಿನಿಂದ ಜಾಗೃತಿ ಜಾಥಾ

ದಾವಣಗೆರೆ, ಜೂ.12- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂತ ಪೌಲರ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾಕ್ಕೆ ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್‌ ಮೆಟ್ಟಿಲ್ಡಾ ವಿಧ್ಯುಕ್ತ ಚಾಲನೆ ನೀಡಿದರು.

ರಾಮ್‌ ಆಂಡ್‌ ಕೋ ವೃತ್ತದಿಂದ ಜಾಥಾ ಪ್ರಾರಂಭವಾಗಿ ಸಿ.ಜಿ ಆಸ್ಪತ್ರೆ ರಸ್ತೆ, ಗುಂಡಿ ವೃತ್ತ ಮತ್ತು ಚರ್ಚ್‌ ರಸ್ತೆಯ ಮಾರ್ಗವಾಗಿ ಸೇಂಟ್‌ ಪಾಲ್ಸ್‌ ಶಾಲಾ ಆವರಣ ಸೇರಿತು.

ಈ ವೇಳೆ ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್‌ ಮಾರ್ಜರಿ, ಕಾಲೇಜಿನ ಪ್ರಾಚಾರ್ಯರಾದ ಕೆ.ಟಿ. ಮೇಘನಾ ಮತ್ತು ಇತರರಿದ್ದರು.

error: Content is protected !!