ಮಲೇಬೆನ್ನೂರಿನ ನಾಡಕಚೇರಿಯಲ್ಲಿ ಪರಿಸರ ದಿನಾಚರಣೆ

ಮಲೇಬೆನ್ನೂರಿನ ನಾಡಕಚೇರಿಯಲ್ಲಿ ಪರಿಸರ ದಿನಾಚರಣೆ

ಮಲೇಬೆನ್ನೂರು, ಜೂ.11- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ನಾಡ ಕಚೇರಿ ಯಲ್ಲಿ ಆವರಣದಲ್ಲಿ ಮತ್ತು ಜಾಮಿಯಾ ನ್ಯಾಷನಲ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಹಾಗೂ ಉರ್ದು ಪ್ರೌಢಶಾಲೆಯಲ್ಲಿ ಪುರಸಭೆ ವತಿಯಿಂದ ಬುಧವಾರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಾಧಿಕಾರಿ ಎ.ಸುರೇಶ್, ಉಪ ತಹಶೀಲ್ದಾರ್‌ ಆರ್.ರವಿ, ಕಂದಾಯ ನಿರೀಕ್ಷಕ ಆನಂದ್, ಪುರಸಭೆಯ ದಿನಕರ್, ಉಮೇಶ್  ಮತ್ತು ನಾಡ ಕಛೇರಿ ಸಿಬ್ಬಂದಿ ಸೇರಿದಂತೆ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.

error: Content is protected !!