ಶಬರಿ ಮಹಿಳಾ ಸಂಘದಿಂದ ಪರಿಸರ ದಿನಾಚರಣೆ

ಶಬರಿ ಮಹಿಳಾ ಸಂಘದಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ.11- ಶಬರಿ ಮಹಿಳಾ ಸಂಘದಿಂದ ಶಾಮನೂರಿನ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ ಅಜಯ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಸಂಘದ ಸದಸ್ಯರು ಶ್ರೀ ಗಣೇಶ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು. ಗೌರವಾಧ್ಯಕ್ಷರಾದ ಶ್ರೀಮತಿ ಶಿವಗಂಗಾ ನಾಗರಾಜ್, ಕಾರ್ಯದರ್ಶಿ ಪ್ರವೀಣ ಚಂದ್ರಶೇಖರ್ ಹಾಗೂ ಶಬರಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!