ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆಗೆ ಮೇಲ್ಚಾವಣಿ ಕುಸಿತ

ಹರಪನಹಳ್ಳಿ ತಾಲ್ಲೂಕಿನಲ್ಲಿ ಮಳೆಗೆ ಮೇಲ್ಚಾವಣಿ ಕುಸಿತ

ಹರಪನಹಳ್ಳಿ,ಮೇ 27- ತಾಲ್ಲೂಕಿನಲ್ಲಿ ಭಾನುವಾರ ತಡ ರಾತ್ರಿ ಸುರಿದ ಭಾರೀ ಮಳೆಗೆ ಕಾವಲಹಳ್ಳಿ ಗ್ರಾಮದ ಗಿಡ್ಡಪ್ಪನವರ ತಿಪ್ಪವ್ವ ಹಾಗೂ ಕೂಲಹಳ್ಳಿ ಗ್ರಾಮದ ಈಡಿಗರ ರಾಯಮ್ಮ ಎನ್ನುವವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಹಾನಿ ಸಂಭವಿಸಿದೆ.

ಕಸಬಾ ಹೋಬಳಿಯಲ್ಲಿ 5 ಮೀ.ಮೀ, ಅರಸೀಕೆರೆ 4.1 ಮೀ.ಮೀ, ತೆಲಗಿ 54.2 ಮೀ.ಮೀ ರಷ್ಟು ಮಳೆಯಾಗಿದ್ದು, ಸರಾಸರಿ 73.3 ಮೀ.ಮೀ ರಷ್ಟು ಮಳೆಯಾಗಿದೆ ಎಂದು ತಹಶೀಲ್ದಾರ್ ಗಿರೀಶಬಾಬು ತಿಳಿಸಿದ್ದಾರೆ.

error: Content is protected !!