ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಎಂ.ಮಾರಪ್ಪ

ಉಪ್ಪಾರ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಎಂ.ಮಾರಪ್ಪ

ಹರಪನಹಳ್ಳಿ, ಮೇ 13- ಉಪ್ಪಾರ ಸಮಾಜದ ನೂತನ ತಾಲ್ಲೂಕು ಅಧ್ಯಕ್ಷರಾಗಿ ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ಎಂ.ಮಾರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಮೇಗಳ ಉಪ್ಪಾರಗೇರಿ ಭಗೀರಥ ಸಮುದಾಯದ ಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಮಾಜದ ನೂತನ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ತಾಲ್ಲೂಕು ಸಮಿತಿ ರಚನೆ ಮಾಡಲಾಯಿತು.

ತಾಲ್ಲೂಕು ಉಪಾಧ್ಯಕ್ಷರಾಗಿ ಎರಡೆತ್ತಿನ ಹಳ್ಳಿ ಬಣಕಾರ್ ರಾಜಪ್ಪ, ಯಲ್ಲಾಪುರ ಎಸ್.ಎಸ್.ಬಸವರಾಜ್, ಜೋಷಿಲಿಂಗಾಪುರ ಎಸ್.ಕೆ.ನಿಂಗಪ್ಪ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ತಲುವಾಗಲು ಪ್ರವೀಣಕುಮಾರ್, ಸಹ ಕಾರ್ಯದರ್ಶಿಯಾಗಿ ಮೇಗಳ ಉಪ್ಪಾರಗೇರಿ ಎಸ್.ಹನುಮಂತ, ದ್ಯಾಪನಾಯಕನಹಳ್ಳಿ ಶಿವರಾಜ್, ಪಿಟ್ರಿ ಗೋಣಿಬಸಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಜೆ.ದುರುಗಪ್ಪ, ಚಿರಸ್ತಳ್ಳಿ ಶಿವರಾಜ್, ತಿಪ್ಪನಾಯಕನಹಳ್ಳಿ ಜಿ.ಭರ್ಲಿಂಗಪ್ಪ, ಗುಡಿ ಆನಂದ ಆಯ್ಕೆಯಾಗಿದ್ದಾರೆ.

ಕಾನೂನು ಸಲಹೆಗಾರರಾಗಿ ಹೆಚ್.ಶಿವರಾಜ್, ಖಜಾಂಜಿಯಾಗಿ ಯಲ್ಲಾಪುರ ದೇವರಾಜ್ ಇವರನ್ನು ಆಯ್ಕೆ ಮಾಡಲಾಯಿತು ಎಂದು ನೂತನ ತಾಲ್ಲೂಕು ಅಧ್ಯಕ್ಷ ಎಂ.ಮಾರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಗೌರವ ಅಧ್ಯಕ್ಷ ಶಂಕರನಳ್ಳಿ ಜಿ.ಹನುಮಂತಪ್ಪ ಮುಖಂಡರಾದ ಬಣಕಾರ್ ಮಂಜಪ್ಪ, ಮಂಜಣ್ಣ, ಎರಡೆತ್ತಿನಹಳ್ಳಿ ಬಿ.ಪರಸಪ್ಪ, ನಾಗರಾಜಪ್ಪ, ಬಸವರಾಜ ಶೃಂಗಾರತೋಟ, ಹರಾಳ ಮೂಗಪ್ಪ, ಪರಸಪ್ಪ, ಎನ್.ಹನುಮಂತ, ಚಂದ್ರು, ಓಬಳಾಪುರ ಪ್ರಸನ್ನ, ಮಹೇಶ ಸೇರಿದಂತೆ ಇತರರು ಇದ್ದರು.

error: Content is protected !!