ಜ್ಯೂ. ಮೋದಿ ಶೋಷಿತರ ನಾಯಕನ ಮನೆಗೆ ಬಿಜೆಪಿ ಪ್ರಚಾರ

ಜ್ಯೂ. ಮೋದಿ ಶೋಷಿತರ ನಾಯಕನ ಮನೆಗೆ ಬಿಜೆಪಿ ಪ್ರಚಾರ

ದಾವಣಗೆರೆ, ಎ. 19 – ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ನಾಮಪತ್ರ ಸಲ್ಲಿಸುವ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಉಡುಪಿ ಜಿಲ್ಲೆಯ ಹಿರಿಯಡ್ಕ ಗ್ರಾಮದ ಸದಾಶಿವನಾಯ್ಕ ಅವರು ಜ್ಯೂನಿಯರ್ ಮೋದಿ ಎಂದೇ ಹೆಸರಾಗಿದ್ದು, ಶೋಷಿತರ ವರ್ಗಗಳ ನಾಯಕ ಬಾಡದ ಆನಂದರಾಜ್ ನಿವಾಸಕ್ಕೆ ಇಂದು ದಿಢೀರ್ ಭೇಟಿ ನೀಡಿದ್ದರು.  ಜ್ಯೂ. ಮೋದಿ ಅವರನ್ನು ನೋಡಿದ ತರಳಬಾಳು ಬಡಾವಣೆಯ ನಿವಾಸಿಗಳು ಆಶ್ಚರ್ಯ ವ್ಯಕ್ತಪಡಿಸಿದರು. ಅವರನ್ನು ಆನಂದ ರಾಜ್ ಕುಟುಂಬ ಪರಿವಾರ  ಸ್ವಾಗತಿಸಿ, ಬೀಳ್ಕೊಟ್ಟರು.

ಬಿಜೆಪಿಯನ್ನು ಮಗದೊಮ್ಮೆ ಅಧಿಕಾರಕ್ಕೆ ತಂದು ದೇಶ ರಕ್ಷಣೆ ಮಾಡಲು ನರೇಂದ್ರ ಮೋದಿಯವರನ್ನು 3 ನೇ ಬಾರಿ ಪ್ರಧಾನಿ ಹುದ್ದೆಗೆ ತರಲು ದಾವಣಗೆರೆ ಜಿಲ್ಲೆ ಯಾದ್ಯಂತ ಪ್ರಚಾರ ಮಾಡುವುದಾಗಿ ಅವರು ಹೇಳಿದರು.

error: Content is protected !!