ಹರಪನಹಳ್ಳಿಯಲ್ಲಿ ಮತದಾನ ಜಾಗೃತಿ

ಹರಪನಹಳ್ಳಿಯಲ್ಲಿ ಮತದಾನ  ಜಾಗೃತಿ

ಹರಪನಹಳ್ಳಿ, ಏ. 2 – ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುರಸಭಾ ವತಿಯಿಂದ ಮತದಾರರಿಗೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂಬ  ಜಾಗೃತಿ ಮೂಡಿಸುವ ಮೂಲಕ ಸ್ವೀಪ್ ಚಟುವಟಿಕೆ ಯನ್ನು ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ ಯರಗುಡಿಯವರ ನೇತೃತ್ವದಲ್ಲಿ ಹಮ್ಮಿಕೊಂಡು,  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಬಸ್‌ ನಿಲ್ದಾಣ ಹಾಗೂ  ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸಿ ಮಾನವ ಸರಪಳಿ ಯನ್ನು ನಿರ್ಮಿಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.  ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಹಾಲಸ್ವಾಮಿ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಪುರಸಭಾ ಸಿಬ್ಬಂದಿಗಳು ಭಾಗವಹಿಸಿದ್ದರು. 

error: Content is protected !!