ಆತ್ಮಿ ಅಸೋಸಿಯೇಷನ್‌ನಿಂದ ಮಹಿಳಾ ದಿನಾಚರಣೆ, ಆರೋಗ್ಯ ಶಿಬಿರ

ಆತ್ಮಿ ಅಸೋಸಿಯೇಷನ್‌ನಿಂದ ಮಹಿಳಾ ದಿನಾಚರಣೆ, ಆರೋಗ್ಯ ಶಿಬಿರ

ದಾವಣಗೆರೆ, ಮಾ. 31- ಆತ್ಮಿ ಅಸೋಸಿಯೇಷನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರದಲ್ಲಿ  ಉಚಿತವಾಗಿ 60 ಮಹಿಳೆಯರಿಗೆ ಥೈರಾಯ್ಡ್ ತಪಾಸಣೆ ನಡೆಸಲಾಯಿತು. 

ಪ್ರೇರಣಾ ಹೆಲ್ತ್ ಕೇರ್ ಕ್ಲಿನಿಕಲ್ ಲ್ಯಾಬೋರೇಟರಿಯ ಸ್ಥಾಪಕರಾದ ಶೀಲಾ ಅನಿಲ್ ಗೌಡರ್ ಮತ್ತು ಅನಿಲ್ ಗೌಡರ್ ತಂಡದವರು ಉಚಿತ ಥೈರಾಯ್ಡ್ ಪರೀಕ್ಷೆ ಮಾಡಿದರು.

ಕಾರ್ಯಕ್ರಮದಲ್ಲಿ ಆತ್ಮಿ ಅಸೋಸಿಯೇಷನ್ ಕೇರ್ ಕ್ಲಬ್‌ನ ಅಧ್ಯಕ್ಷರಾದ ಬಿ. ಪ್ರಸನ್ನ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶೋಭ ಗೌಡರ್ ಸ್ವಾಗತಿಸಿದರು. ಶ್ರೀಲಕ್ಷ್ಮಿ ಅಜಿತ್ ವಂದಿಸಿದರು.

error: Content is protected !!