ಹರಿಹರ, ಮಾ.6- ನಗರದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಜಾಥಾಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ ನೀಡಿದರು. ಫಲ್ಸ್ ಪೋಲಿಯೋ ಜಾಥಾವು ನಗರಸಭೆಯ ಆವರಣದಿಂದ ಪ್ರಾರಂಭಗೊಂಡು ನಗರದ ಪ್ರಮುಖ ವೃತ್ತದಲ್ಲಿ ಸಂಚರಿಸಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಡೆಸುವ ಮೂಲಕ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ಪೌರಾಯುಕ್ತ ಐಗೂರು ಬಸವರಾಜ್, ಆರೋಗ್ಯ ಅಧಿಕಾರಿ ಪ್ರವೀಣ್, ನವೀನ್, ಡಾ. ವಿಶ್ವನಾಥ್, ಆರೋಗ್ಯ ಇಲಾಖೆಯ ರವಿಪ್ರಕಾಶ್, ಸಂತೋಷ ದಾದಾಪೀರ್, ಸುಧಾ ಸಳಕೆ ಇತರರು ಹಾಜರಿದ್ದರು.
ಹರಿಹರದಲ್ಲಿ ಪೋಲಿಯೋ ಲಸಿಕೆ ಜಾಥಾ
