ಜಗಳೂರು, ಮಾ. 1 – ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕನ್ನಡ ಚಲನಚಿತ್ರ ನಟ ಕೆ. ಶಿವರಾಮ್ ನಿಧನಕ್ಕೆ ಮೇಣದ ಬತ್ತಿ ಹಚ್ಚಿ ಸಂತಾಪ ಸೂಚಿಸಲಾಯಿತು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ಕೆ. ಶಿವರಾಮ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬಡವರಿಗೆ ಸೂರು ಕಲ್ಪಿಸಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಿದ ಮೊದಲ ಅಧಿಕಾರಿಯಾಗಿದ್ದರು ಎಂದರು.
ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಸಂಘಟನೆ ಯೊಂದಿಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಬಳಿ ಗುರುತಿಸಿಕೊಂಡಿದ್ದ ಕೆ. ಶಿವರಾಮ್ ಅವರ ಅಕಾಲಿಕ ಮರಣ ನೋವು ತಂದಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ನಾಗಲಿಂಗಪ್ಪ, ಛಲವಾದಿ ಸಮಾಜದ ಗೌರವ ಅಧ್ಯಕ್ಷ ಸಿ. ಲಕ್ಷ್ಮಣ, ಮುಖಂಡ ರಾದ ಓಬಣ್ಣ, ರಾಜಪ್ಪ ವ್ಯಾಸಗೊಂಡನ ಹಳ್ಳಿ, ಬಿದರಕೆರೆ ರವಿಕುಮಾರ್, ಸತೀಶ್ ಮಲೆಮಾಚಿಕೆರೆ, ವಕೀಲರಾದ ಮರೇನಹಳ್ಳಿ ಬಸವರಾಜ್ ಸಣ್ಣ ಓಬಯ್ಯ, ಚಿಕ್ಕಮ್ಮನಹಟ್ಟಿ ಮಂಜಣ್ಣ, ಲೋಕೇಶ್, ಮಾದಿಹಳ್ಳಿ ಮಂಜುನಾಥ್, ನಾಗೇಶ್, ಗೌರಿಪುರ ಕುಬೇರಪ್ಪ, ಬಸವರಾಜ್ ಸಿದ್ದಮ್ಮನಹಳ್ಳಿ, ಗಿರೀಶ್ ಸೇರಿದಂತೆ ಇತರರು ಇದ್ದರು.