ಮಲೇಬೆನ್ನೂರು, ಮಾ.1- ದೇವರಬೆಳಕೆರೆ ಗ್ರಾಮದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಕಾಲಶಾಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಗಮನ ಸೆಳೆದವು. ಇದಕ್ಕೂ ಮುನ್ನ ದೇವರ ಬಾವುಟ, ಹೂವಿನಹಾರ ಹಾಗೂ ಇತ್ಯಾದಿ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ರಾತ್ರಿ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಯಿತು. ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
February 5, 2025