ಜಿಗಳಿ ರಂಗನಾಥ್‌ ಅವರಿಗೆ ಪ್ರಶಸ್ತಿ

ಜಿಗಳಿ ರಂಗನಾಥ್‌ ಅವರಿಗೆ ಪ್ರಶಸ್ತಿ

ಮಲೇಬೆನ್ನೂರು, ಫೆ. 29 – ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಕರ್ನಾಟಕ ಜಾನಪದ ಕಲಾ ಕೇಂದ್ರ, ಶಿವಮೊಗ್ಗ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಾಜನೂರು, ಜೆಐಸಿ, ಶಿವಮೊಗ್ಗ ಶಾಶ್ವತಿ ಘಟಕ, ತುಂಗಭದ್ರಾ ಕನ್ನಡ ಯುವಕರ ಸಂಘ, ತುಂಗಾ ಪರಿಸರ ಅಭಿವೃದ್ಧಿ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವ-ಸಹಾಯ ಸಂಘಗಳ ಒಕ್ಕೂಟ, ಗಾಜನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಗಾಜನೂರಿನ ಸಂತೆ ಮೈದಾನದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜಾನಪದ ಯುವ ಜನ ಮೇಳದಲ್ಲಿ ಹರಿಹರ ತಾಲ್ಲೂಕಿನ ರಂಗಶ್ರೀ ಕಲಾ ತಂಡದ ನಾಯಕ ಜಿಗಳಿಯ ಡಿ. ರಂಗನಾಥ್ ಅವರಿಗೆ ಮಲೆನಾಡ ಜಾನಪದ ಕೋಗಿಲೆ ಎಂಬ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿ ನರಸಿಂಹಮೂರ್ತಿ, ವೀರಭದ್ರಪ್ಪ, ಜೆ. ನಾಗರಾಜ್, ಶ್ರೀನಿವಾಸ್, ಪೂವಯ್ಯ, ಬಿ.ಎಸ್. ನಾಗರಾಜ್, ಹೊನ್ನಾಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಾಗರತ್ನ, ಹೊಳೆಸಿರಿಗೆರೆಯ ಎಂ. ಶಿವಕುಮಾರ್ ಈ ವೇಳೆ ಉಪಸ್ಥಿತರಿದ್ದರು.

error: Content is protected !!