ಸಾಂಸ್ಕೃತಿಕ ಕಾರ್ಯಕ್ರಮಗಳ ಹವ್ಯಾಸ ರೂಢಿಸಿಕೊಳ್ಳಿ : ನಿರಂಜನಾನಂದಪುರಿ ಶ್ರೀ

ಸಾಂಸ್ಕೃತಿಕ  ಕಾರ್ಯಕ್ರಮಗಳ ಹವ್ಯಾಸ ರೂಢಿಸಿಕೊಳ್ಳಿ : ನಿರಂಜನಾನಂದಪುರಿ ಶ್ರೀ

ಹರಿಹರ,ಫೆ. 29-   ಓದು ಬರಹದ ಜೊತೆಗೆ ಉತ್ತಮವಾದ ಸಾಂಸ್ಕೃತಿಕ   ಕಾರ್ಯ ಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು  ಜಗದ್ಗುರು ಶ್ರೀ  ನಿರಂಜನಾನಂದಪುರಿ ಮಹಾಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಹೊರ ವಲಯದಲ್ಲಿರುವ ಚಂದ್ರಗುಪ್ತ ಮೌರ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ   `ಆಕೃತಿ-6′  ಸಮಾರಂಭದ ಸಾನಿಧ್ಯ ವಹಿಸಿ, ಸ್ವಾಮೀಜಿ ಮಾತನಾಡಿ, ಪಾಠ- ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರ ಜೊತೆಗೆ ಹಿರಿಯರನ್ನು, ಗುರುಗಳನ್ನು ಮತ್ತು ಹೆತ್ತವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ  ಕಿವಿಮಾತು ಹೇಳಿದರು.

 ಅತಿಥಿಗಳಾಗಿ  ಶಾಸಕ ಬಿ.ಪಿ ಹರೀಶ್, ಎಸ್‌ಕೆಎಂಎಸ್‌ಎಸ್ ಸದಸ್ಯ ನಂದಿಗಾವಿ ಶ್ರೀನಿವಾಸ್,  ಚಂದ್ರಗುಪ್ತ ಮೌರ್ಯ ಸಂಸ್ಥೆಯ  ಕಾರ್ಯದರ್ಶಿ ಎಸ್. ನಿಂಗಪ್ಪ, ಪ್ರಾಂಶುಪಾಲ ರಾದ  ಡಾ. ಶೃತಿ ಇನಾಂದಾರ್, ಗೌರವ ಅತಿಥಿ ಗಳಾಗಿ  ದಾವಣಗೆರೆ ಡಿಡಿಪಿಐ ಗುತ್ತಲದ್ ಕೊಟ್ರೇಶ್,  ಹರಿಹರ ಬಿಇಓ  ಹನುಮಂತಪ್ಪ ಎಂ,  ಸಿಆರ್‌ಪಿ ಬೆಳ್ಳೂಡಿ   ಸುರೇಶ್ ಹಾಲುಮತ,  ಇನ್‌ಸೈಟ್ಸ್  ನಿರ್ದೇಶಕ ಜಿ.ಬಿ.ವಿನಯ್‌ಕುಮಾರ್,   ನಿವೃತ್ತ ಬಿಇಓ  ಕೊಟ್ರಪ್ಪ,  ಮುಖ್ಯ ಶಿಕ್ಷಕ ಎಚ್. ದಾದಾಪೀರ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!