ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯ : ತ್ಯಾವಣಿಗಿ ವೀರಭದ್ರಸ್ವಾಮಿ

ಮಕ್ಕಳಿಗೆ ಸಂಸ್ಕಾರ ಕಲಿಸುವುದು ಮುಖ್ಯ : ತ್ಯಾವಣಿಗಿ ವೀರಭದ್ರಸ್ವಾಮಿ

ಹರಿಹರ, ಫೆ. 11- ಸಾಮಾನ್ಯವಾಗಿ ಶಾಲೆಗಳಲ್ಲಿ ಶಿಕ್ಷಣವನ್ನು ಮಾತ್ರ ಕೊಡಲಾಗುತ್ತದೆ. ಪೋಷಕರೂ ಸಹ ಅಂಕ ಗಳಿಕೆಯ ಕಡೆಗೆ ಗಮನಹರಿಸುತ್ತಾರೆ. ಆದರೆ, ಶಿಕ್ಷಣಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು ಸಂಸ್ಕಾರಯುತ ಗುಣಗಳನ್ನು ಮಕ್ಕಳಿಗೆ ಕಲಿಸುವುದೂ ಬಹಳ ಮುಖ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ತ್ಯಾವಣಿಗಿ ವೀರಭದ್ರಸ್ವಾಮಿ ಹೇಳಿದರು.

ಶಾರದಾ ವಿದ್ಯಾಲಯದ 18ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ  ಮಲ್ಲೇಶ್‌ ಶ್ಯಾಗಲೆ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ಎ.ಸಿ.ಎಂ. ಶಾಲೆಯ ಸಂಸ್ಥಾಪಕ ಮಂಜುನಾಥಸ್ವಾಮಿ ಹಾಗೂ ಸಂಸ್ಥೆಯ ಶ್ರೀಮತಿ ನಯನ ವಿ. ಸ್ವಾಮಿ ಉಪಸ್ಥಿತರಿದ್ದರು.

ಶಿಕ್ಷಕಿ ರೂಪ ಸ್ವಾಗತಿಸಿದರು.  ಮುಖ್ಯ ಶಿಕ್ಷಕಿ ಮಂಜುಳ ವಂದಿಸಿದರು. ಶಿಕ್ಷಕಿ ಕವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಯೀಮಾ  ಹಾಗೂ ಶಿಕ್ಷಕಿ ಆಸ್ಮಾಬಾನು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!