ಜಗಳೂರು, ಫೆ.8- ಕಾರ್ಯಕರ್ತರ ಮತ್ತು ಮುಖಂಡರುಗಳ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳುವು ದಾಗಿ ಕಳೆದ ವಿಧಾನ ಸಭಾಚುನಾವಣೆಯಲ್ಲಿ ಪಕ್ಷೇ ತರರಾಗಿ ಸ್ಪರ್ಧಿಸಿ ಪರಾಜಿತರಾಗಿರುವ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂರಾರು ಕಾರ್ಯಕರ್ತರು ಅಭಿಮಾನಿ ಗೊಳಟ್ಟಿಗೆ ಮಹತ್ವದ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು, ಸೋತಿದ್ದೇನೆ. 50 ಸಾವಿರ ಮತಗಳನ್ನು ಪಡೆದುಕೊಂಡಿದ್ದೆ. ಮತದಾರರು, ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರ ಭವಿಷ್ಯಕ್ಕಾಗಿ ನಾನು ಬೇರೊಂದು ಪಕ್ಷಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.
ಇದೇ ದಿನಾಂಕ 12ರ ಸೋಮವಾರ ವಾಲ್ಮೀಕಿ ಭವನದಲ್ಲಿ ಮಹತ್ವದ ಸಭೆ ಮಾಡಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮುಖಂಡರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ನಾನು ಯಾವ ಪಕ್ಷಕ್ಕೆ ಹೋಗುತ್ತೇನೆ ಎಂಬುವುದು ನಿರ್ಧಾರ ಮಾಡುತ್ತೇನೆ. ಯಾವ ಪಕ್ಷವೂ ಬೇಡ ಸ್ವಾತಂತ್ರ ಅಭ್ಯರ್ಥಿಯಾಗಿಯೇ ಉಳಿಯಲಿ ಎಂದರೆ ಹಾಗೇ ಉಳಿಯುತ್ತೇನೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರಲ್ಲದೆ ಎಲ್ಲಾ ಅಭಿಮಾನಿಗಳು ಕಾರ್ಯಕರ್ತರು ಸೋಮವಾರದ ಮಹತ್ವದ ಸಭೆಗೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಲೋಕಸಭೆ ಚುನಾವಣೆ ಸಮೀಪವಿದ್ದು, ಮುಖಂಡರು ಕಾರ್ಯಕರ್ತರ ಭವಿಷ್ಯದ ಹಿತದೃಷ್ಟಿಯಿಂದ ಬೇರೊಂದು ಪಕ್ಷಕ್ಕೆ ಹೋಗುವ ತೀರ್ಮಾನ ಮಾಡಿದ್ದೇನೆ. ಮುಂದಿನ ತಾ.ಪಂ. ಜಿ.ಪಂ ಚುನಾವಣೆಯಲ್ಲಿ ನನ್ನ ಬೆಂಬಲಿಗರಿಗೆ ಅನುಕೂಲವಾಗಲಿ ಎಂಬ ಆಶಯದಿಂದ ನಿರ್ಧಾರ ಮಾಡಿದ್ದೇನೆ ಎಂದರು.
ರಾಜ್ಯ ನಾಯಕರಿಂದ ಆಹ್ವಾನ ಬಂದಿಲ್ಲ : ಕಾಂಗ್ರೆಸ್ನಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಸ್.ಎಸ್.ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಅಲ್ಲದೇ ಬಿಜೆಪಿಯಿಂದ ಸಂಸದ ಸಿದ್ದೇಶ್ವರ ಹಾಗೂ ವಿಜಯೇಂದ್ರ ಹೀಗೆ ಎರಡು ಪಕ್ಷಗಳಿಂದಲೂ ನನಗೆ ಅಹ್ವಾನ ಬಂದಿಲ್ಲ. ಮುಖಂಡರು ಬೆಂಬಲಿಗರು ಯಾವ ಪಕ್ಷಕ್ಕೆ ಹೋಗಿ ಎಂದು ಮಾರ್ಗದರ್ಶನ ಮಾಡುತ್ತಾರೋ ಆ ಪಕ್ಷಕ್ಕೆ ಹೊಗುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪೇಸ್ವಾಮಿ ಗೌಡ್ರು, ಎಲ್.ಬಿ.ಬೈರೇಶ್, ಎನ್.ಎಸ್.ರಾಜಣ್ಣ, ವೀರೇಶ್, ವೆಂಕಟೇಶ್, ಸೊಕ್ಕೆ ರಾಜಣ್ಣ, ಸೂರಲಿಂಗಪ್ಪ, ಲೋಕಣ್ಣ, ಮಾರಣ್ಣ ಸೇರಿದಂತೆ ನೂರಾರು ಅಭಿಮಾನಿ ಗಳು ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿದ್ದರು.