ಜಿಗಳಿಯಲ್ಲಿ ಕನಕದಾಸರ ಜಯಂತಿ ಆಚರಣೆ

ಜಿಗಳಿಯಲ್ಲಿ ಕನಕದಾಸರ ಜಯಂತಿ ಆಚರಣೆ

ಮಲೇಬೆನ್ನೂರು, ಡಿ.5- ಜಿಗಳಿ  ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸಶ್ರೇಷ್ಠ ಸಂತ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿಕ್ಷಕ ಮಲ್ಲಿಕಾರ್ಜುನ್ ಅವರು ಕನಕದಾಸರ ಕುರಿತು ವಿವರವಾಗಿ ತಿಳಿಸಿದರು. ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್, ಮಾಜಿ ಅಧ್ಯಕ್ಷ ಎಕ್ಕೆಗೊಂದಿ ರುದ್ರಗೌಡ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಎಕ್ಕೆಗೊಂದಿ ಚೇತನ್‌ಕುಮಾರ್, ಸದಸ್ಯರಾದ ಡಿ.ಎಂ.ಹರೀಶ್, ಕೆ.ಜಿ.ಬಸವರಾಜ್, ಶ್ರೀಮತಿ ಆಶಾ ಅಣ್ಣಪ್ಪ, ಹೋಬಳಿ ಆನಂದಗೌಡ, ಶ್ರೀಮತಿ ಜಯಮ್ಮ ಬಿ.ಕೆ.ರಂಗನಾಥ್, ಕೆ.ಜಿ.ಮಹಾಂತೇಶ್, ಪಿ.ಹೆಚ್.ದೇವರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ.ದೇವೇಂದ್ರಪ್ಪ, ಎಂ.ವಿ.ನಾಗರಾಜ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಜಿ.ಪಿ.ಹನುಮಗೌಡ, ಜಿ.ಆರ್.ಚಂದ್ರಪ್ಪ, ಟಿ.ಎಸ್.ರಾಮಪ್ಪ, ಪೂಜಾರ್ ನಾಗರಾಜ್, ಎಂ.ಜಯಣ್ಣ, ಪತ್ರಕರ್ತ ಪ್ರಕಾಶ್, ಎಸ್‌ಡಿಎಂಸಿ ಸದಸ್ಯರಾದ ವಿಜಯ ಭಾಸ್ಕರ್, ಟಿ.ನಾಗರಾಜ್, ಶೀಲ ಹನುಮಂತಪ್ಪ, ಪಿಡಿಓ ಕೆ.ಎಸ್.ಉಮೇಶ್, ಕಾರ್ಯದರ್ಶಿ ಸುಜಾತ, ಶಾಲಾ ಮುಖ್ಯ ಶಿಕ್ಷಕ ಜಿ.ನಾಗೇಶ್, ಶಿಕ್ಷಕರಾದ ದೀಪಾ, ಕರಿಬಸಮ್ಮ, ಲಿಂಗರಾಜ್, ಗುಡ್ಡಪ್ಪ, ಶ್ರೀನಿವಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

error: Content is protected !!