ನಗರದಲ್ಲಿ ವಿಶ್ವ ಏಡ್ಸ್ ಅರಿವು ಜಾಥಾ

ನಗರದಲ್ಲಿ ವಿಶ್ವ ಏಡ್ಸ್ ಅರಿವು ಜಾಥಾ

ದಾವಣಗೆರೆ, ಡಿ.5- ವಿಶ್ವ ಏಡ್ಸ್ ದಿನಾಚರಣೆ   ಅಂಗವಾಗಿ ನಗರದ ಚರ್ಮ ವೈದ್ಯರ ಸಂಘ ಹಾಗೂ ಜೆಜೆಎಂ ಮೆಡಿಕಲ್ ಕಾಲೇಜು, ಎಸ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್  ಇವರುಗಳ ಸಂಯುಕ್ತಾಶ್ರಯದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ  ದೂರದ ನಡಿಗೆಯನ್ನು ನಿನ್ನೆ ನಡೆಸಲಾಯಿತು. 

ಡಿಸೆಂಬರ್ 1 ರಂದು ವಿಶ್ವ ಆರೋಗ್ಯ ಸಂಸ್ಥೆಯು ‘ವಿಶ್ವ ಏಡ್ಸ್ ದಿನಾಚರಣೆ’ ಆಚರಿಸುತ್ತದೆ. ಪ್ರತಿ ವರ್ಷ, ಒಂದೊಂದು ವಿಶಿಷ್ಟ ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಏಡ್ಸ್ ದಿನ 2023ರ ಧ್ಯೇಯ ‘ಸಮುದಾಯಗಳು ಮುನ್ನಡೆಸಲಿ’ ಅಂದರೆ ಎಚ್ಐವಿ/ಏಡ್ಸ್ ಒಂದು ಜಾಗತಿಕ ಆರೋಗ್ಯ ಸವಾಲಾಗಿರುವು ದರಿಂದ ಸಮುದಾಯದ ಜನರು  ಅದನ್ನು ಕೊನೆಗೊಳಿಸಲು ಒಗ್ಗಟ್ಟಾಗಿ ಮುಂದಾಗಬೇಕೆಂಬುದು ದಿನಾಚರಣೆ ಉದ್ದೇಶ ವಾಗಿದೆ.

ಈ ನಡಿಗೆಯಲ್ಲಿ ತಜ್ಞ ವೈದ್ಯರುಗಳಾದ ಡಾ. ಬಿ.ಕೆ ವಿಶ್ವನಾಥ್, ಡಾ.ಸೂಗಾರೆಡ್ಡಿ,  ಡಾ. ಮಂಜುನಾಥ್ ಹುಲ್ಮನಿ,  ಡಾ. ಎಂ.ಸಿ. ರೂಪ, ಪ್ರಾಧ್ಯಾಪಕರಾದ ಡಾ. ಎಚ್.ಸಿ. ಮಂಗಳ, ಡಾ. ಬಿ. ರಶ್ಮಿ, ಡಾ.ಮಧು, ಡಾ. ಡಿ. ಜಿ. ವಿನಯ್, ಡಾ.ಮಲ್ಲಿಕಾರ್ಜುನ್, ಡಾ.ಅಕ್ಷಯ್ ಮತ್ತಿತರರು ಭಾಗವಹಿಸಿದ್ದರು.

error: Content is protected !!