ಹೊನ್ನಾಳಿ : ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು

ಹೊನ್ನಾಳಿ : ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು

ಹೊನ್ನಾಳಿ, ಡಿ. 4- ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಸದಾಶಿವಪುರ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತಹಶೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

ಈ ಜಾಗದ ಸಮಸ್ಯೆ 11 ವರ್ಷಗಳಾದರೂ ಬಗೆಹರಿಯದ ಕಾರಣ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಅವರ ಸಂಬಂಧಿಕರು ಮೃತ ದೇಹವನ್ನು ತಮ್ಮ ಜಮೀನುಗಳಲ್ಲಿ ಮತ್ತು ಕೆರೆ-ರಸ್ತೆಯ ಅಕ್ಕಪಕ್ಕದಲ್ಲಿ ಸ್ಮಶಾನ ಹೂಳುತ್ತಿದ್ದರು.

ತಾಲ್ಲೂಕು ಆಡಳಿತ ಈ ಹಿಂದೆಯೇ ಒತ್ತುವರಿಯಾಗಿದ್ದ  ಜಾಗವನ್ನು ಗ್ರಾಮಸ್ಥರ ಮನವಿ ಮೇರೆಗೆ ಜಾಗದ ಅಳತೆ ಮಾಡಿಸಿ ಒತ್ತುವರಿ ಮಾಡಿದ್ದ ಜಮೀನುಗಳ ಮಾಲೀಕ ರಿಗೆ ನೋಟೀಸ್ ಜಾರಿ ಮಾಡಿದ್ದರೂ  ಸ್ಮಶಾನದ ಜಾಗವನ್ನು ತೆರವುಗೊಳಿಸದೇ, ಯಾರೇನು ಮಾಡಿಯಾರು ಎಂಬ ಧೋರಣೆಯಲ್ಲಿದ್ದರು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಸ್ಮಶಾನಕ್ಕೆ ಮೀಸಲಿರಿಸಿದ್ದ ಜಾಗವನ್ನು ಒತ್ತುವರಿ ಮಾಡಲಾಗಿರುವ ಬಗ್ಗೆ ಸೋಮ ವಾರ ತಹಶೀಲ್ದಾರ್ ಪಟ್ಟರಾಜೇಗೌಡ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಕ್ಷಣವೇ ತಹಶೀಲ್ದಾರ್ ಅವರು ಕಂದಾಯ ಅಧಿಕಾರಿಗಳ ತಂಡವನ್ನು ರಚಿಸಿ, ಒತ್ತುವರಿ ಯಾಗಿದ್ದ ಜಾಗದ ತೆರವು ಕಾರ್ಯಾಚರಣೆ ನಡೆಸಿ, ಶವಸಂಸ್ಕಾರ ಮಾಡುವ ವ್ಯವಸ್ಥೆ ಯನ್ನು ಇಂದು ಸಂಜೆಯೊಳಗೆ ಮಾಡಿಸು ವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ತಂಡದವರು ಒತ್ತುವರಿಯಾಗಿದ್ದ ಜಾಗವನ್ನು ತೆರವು ಗೊಳಿಸಿ ಮೃತ ದೇಹದ ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿದ ಅಪರೂಪದ ಮಾನವೀಯತೆ, ಘಟನೆ ನಡೆದಿದೆ.

ಅನೇಕ ಬಾರಿ ಜಾಗ ತೆರವುಗೊಳಿಸುವಂತೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸುತ್ತಲೇ ಬರಲಾಗಿತ್ತು. ಇಂದು (ಸೋಮವಾರ) ಮೃತ ವ್ಯಕ್ತಿ ಭೋವಿ ಜನಾಂಗದ ಬೀರೇಶ್ ಅವರ ಅಂತಿಮ ಸಂಸ್ಕಾರ ಮಾಡಲು ಸ್ಮಶಾನ ಜಾಗದ ಒತ್ತುವರಿ ಸಮಸ್ಯೆಯ ಬಗ್ಗೆ ತಹಶೀಲ್ದಾರ್ ಪಟ್ಟರಾಜೇಗೌಡ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ರಾಜಸ್ವ ನಿರೀಕ್ಷಕ ದಿನೇಶ್ ಬಾಬು ಅವರ ನೇತೃತ್ವದಲ್ಲಿ ತಂಡ ರಚಿಸಿ, ಒತ್ತುವರಿ ಜಾಗ ಅಳತೆ ಮಾಡಿಸಿ ಜೆಸಿಬಿ ಮೂಲಕ ಅಗೆಸಿ ಮೃತರ ಅಂತಿಮ ಸಂಸ್ಕಾರವನ್ನು ಸಂಜೆಯೊಳಗೆ ಮುಗಿಸಲು ಅಧಿಕಾರಿಗಳು, ಕುಟುಂಬ ವರ್ಗದವ ರೊಂದಿಗೆ ಅಧಿಕಾರಿಗಳು ಸಹಕರಿಸಿದ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ರಾಜಸ್ವ ನಿರೀಕ್ಷಕ ದಿನೇಶ್ ಬಾಬು, ಗ್ರಾಮದ ಆಡಳಿತಾಧಿಕಾರಿ ಧರ್ಮಪ್ಪ, ಸರ್ವೇಯರ್ ಲೋಕೇಶ್ ನಾಯ್ಕ, ಗ್ರಾ.ಪಂ. ಕಾರ್ಯದರ್ಶಿ ಲೋಕೇಶ್, ಮೃತರ ಕುಟುಂಬ ವರ್ಗದವರು, ಗ್ರಾಮಸ್ಥರು ಹಾಜರಿದ್ದರು.

ತಹಶೀಲ್ದಾರ್ ಮತ್ತವರ ತಂಡದ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿ, ಅಭಿನಂದಿಸಿದ್ದಾರೆ. 

error: Content is protected !!