ತುರ್ಚಘಟ್ಟದಲ್ಲಿ ಕಸಾಪ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ

ತುರ್ಚಘಟ್ಟದಲ್ಲಿ ಕಸಾಪ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ

ದಾವಣಗೆರೆ, ಡಿ. 4 – ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ತುರ್ಚಘಟ್ಟ, ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಂಯುಕ್ತ ಆಶ್ರಯದಲ್ಲಿ ‘ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ’ ಹಾಗೂ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ಆಟೋಟ ಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ತುರ್ಚಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಸಿ.ಎಂ. ವಹಿಸಿದ್ದರು. ಉದ್ಘಾಟನೆಯನ್ನು
ವೇದಿಕೆಯ ಗಣ್ಯರು ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕ ನುಡಿಯನ್ನು ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತಿನ ಹಿನ್ನೆಲೆ-ಉದ್ದೇಶ ಕುರಿತು ಪ್ರಸ್ತಾಪಿಸಿದರು. 

ಕಾರ್ಯಕ್ರಮದ ಉಪನ್ಯಾಸವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕ ಹಾಗೂ ಬಾಪೂಜಿ ವಿದ್ಯಾ ಸಂಸ್ಥೆಯ ಕುಣೆಬೆಳಕೆರೆ ಕನ್ನಡ ಭಾಷಾ ಶಿಕ್ಷಕ ಶಿವಕುಮಾರ್ ಆರ್. ವಚನ ಸಾಹಿತ್ಯ ಮತ್ತು ಜೀವನದ ಮೌಲ್ಯಗಳ ಕುರಿತು ಮಾತನಾಡುತ್ತಾ, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳೆದು ಬಂದ ರೀತಿ ವಚನಕಾರರು ತಮ್ಮ ವಚನಗಳ ಮೂಲಕ ಜೀವನದ ಮೌಲ್ಯಗಳನ್ನು ಹೇಗೆ ಜಾಗೃತಿಗೊಳಿಸಬೇಕೆಂಬುದನ್ನು ತಿಳಿಸಿದರು. ಬಾಲ್ಯದಿಂದಲೇ ಮಕ್ಕಳಿಗೆ ಶಾಲೆಗಳಲ್ಲಿ ವಚನ ಸಾಹಿತ್ಯದ ಮೌಲ್ಯಗಳ ಬಗ್ಗೆ ತಿಳಿಸಿದರೆ ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪು ಗೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಅಂತರಂಗ ಶುದ್ಧಿಯಿಂದ ಬಹಿರಂಗ ಶುದ್ಧಿಗೊಳ್ಳಬಹುದು ಎಂದು ಕಳಬೇಡ ಕೊಲಬೇಡ, ಹುಸಿಯ ನುಡಿಯಲೂ ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ಕೂಡಲಸಂಗಮದೇವನೊಲಿಸುವ ಪರಿ ಎಂಬ ವಚನಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ವಚನ ಸಾಹಿತ್ಯದ ಮಹತ್ವವನ್ನು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಾಗರಿಕರ ಸಹಾಯವಾಣಿಯ ನವೀನ್ ಮಾತನಾಡುತ್ತಾ, ಹಿರಿಯ ನಾಗರಿಕರಿಗೆ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹಾಗೂ ತಾಲ್ಲೂಕು ಕಸಾಪ ನಿರ್ದೇಶಕಿ ಕಲ್ಪನಾ ಉಪಸ್ಥಿತರಿದ್ದರು. ನಿರೂಪಣೆಯನ್ನು ಶಿಕ್ಷಕಿ ಸುಮಿತ್ರಾ ಎಂ.ಎಲ್., ಸ್ವಾಗತವನ್ನು ಶಿಕ್ಷಕ ಕೆ.ಎಂ. ವಿರೂಪಾಕ್ಷಯ್ಯ, ವಂದನಾರ್ಪಣೆಯನ್ನು ಶಿಕ್ಷಕಿ ವೀಣಾ ಕೆ. ನಡೆಸಿಕೊಟ್ಟರು. 

error: Content is protected !!