ಏತ ನೀರಾವರಿ ಯೋಜನೆಯಡಿ ಶ್ರೀರಾಮನ ಕೆರೆಗೆ ನೀರು

ಏತ ನೀರಾವರಿ ಯೋಜನೆಯಡಿ ಶ್ರೀರಾಮನ ಕೆರೆಗೆ ನೀರು

ಗಂಗಾ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ, ಡಿ 4 –  ಎಂ.ಹನುಮನಹಳ್ಳಿ, ಸಿಂಗಟಗೆರೆ ಸಮೀಪದ ಕೆರೆಗೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಿದೆ. ಈ ಕೆರೆಗೆ ಶಾಸಕ ಡಿ.ಜಿ.ಶಾಂತನಗೌಡ ಗಂಗಾ ಪೂಜೆ ಸಲ್ಲಿಸಿ, ಹಲವಾರು ಮುಖಂಡರೊಂದಿಗೆ ಬಾಗಿನ ಅರ್ಪಿಸಿದರು. 

ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಳೆ ಅಭಾವ ಆದಾಗಲೆಲ್ಲಾ ವಿಶೇಷವಾಗಿ ಕುಡಿಯುವ ನೀರು ಮತ್ತು ಜಮೀನುಗಳ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗುವ ಸಮಸ್ಯೆ ಎದುರಾಗುತ್ತಿತ್ತು. ಇದಕ್ಕೆ ಪರಿಹಾರ ಎಂಬಂತೆ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ನಡೆಸಲಾಗಿದ್ದು. ತಾಲ್ಲೂಕಿನ ಎಂ.ಹನುಮನಹಳ್ಳಿ, ಸಿಂಗಟಗೆರೆ ಶ್ರೀರಾಮನಕೆರೆಗೆ ನೀರು ಹರಿಸಿದೆ. ಇದರಿಂದ ರೈತರ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಾಗುವ ಮೂಲಕ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗುತ್ತಿದೆ ಎಂದು ಶಾಸಕ ಶಾಂತನಗೌಡ ಹೇಳಿದರು. 

ಶಿವಮೊಗ್ಗದ ಕೆ.ಎಂ.ಎಫ್‌ ನಿರ್ದೇಶಕರಾದ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕರೆ ಅಭಿವೃದ್ದಿಯ ಕೆಲಸದಲ್ಲಿ ಸುತ್ತಮುತ್ತಲ ಗ್ರಾಮಗಳ ಮುಖಂಡರು ಕೂಡ ಸಹಕರಿಸಿದ್ದು ಸರ್ಕಾರ ಮತ್ತು ಗ್ರಾಮಸ್ಥರುಗಳ ಸಹಕಾರದಿಂದ ಇಂದು ಶ್ರೀರಾಮನಕೆರೆ ನೀರಿನಿಂದ ಭರ್ತಿಯಾಗಿದೆ. ರೈತರಲ್ಲಿ ಜೀವನದ ಭರವಸೆ ನೀಡಿದೆ ಎಂದು ಹೇಳಿದ ಅವರು, ಈ ಕೆರೆಯು ಇಂದು ತುಂಬಿದ್ದು ಇದಕ್ಕೆ ಪ್ರಸ್ತುತ ಶಾಸಕ ಶಾಂತನಗೌಡರ ಪ್ರಯತ್ನ ಮತ್ತು ಸಹಕಾರ ಅನನ್ಯವಾಗಿದೆ. 2023 ರಿಂದ ಏತ ನೀರಾವರಿ ಮೂಲಕ ನದಿಯಿಂದ ನೀರು ತುಂಬಿಸಲು ಚಾಲನೆ ನೀಡಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್‌.ಎಂ. ಉಮಾಪತಿ, ಹಿರಿಯ ಮುಖಂಡರಾದ ಬಿ.ಸಿದ್ದಪ್ಪ, ಕಾಂಗ್ರೆಸ್ ಅಧ್ಯಕ್ಷ ಎಚ್‌.ಬಿ.ಶಿವಯೋಗಿ, ಟಿ.ಎ.ಪಿ.ಸಿ.ಎಂ.ಸಿ. ನಿರ್ದೇಶಕ ಸಿಂಗಟಗೆರೆ ಜಯಣ್ಣ, ಗಜೇಂದ್ರಪ್ಪ, ಗ್ರಾ.ಪಂ.ಅನುಪಮ, ಶಾಂತಮ್ಮ, ಅಶ್ವಿನಿ, ವರದರಾಜಪ್ಪ, ಡಿ.ಸಿ.ಸಿಬ್ಯಾಂಕ್ ನಿರ್ದೇಶಕ ಷಣ್ಮುಖಪ್ಪ, ಹಾಲು ಒಕ್ಕೂಟದ ಸೋಮಶೇಖರ್‌, ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್‌.ಎ. ಗದ್ದಿಗೇಶ್‌, ಆರ್‌.ನಾಗಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದಪ್ಪ, ಅರಬಗಟ್ಟೆ ರಮೇಶ್‌, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಿ.ಜಿ.ಜಗದೀಶ್‌, ಶಂಕ್ರಣ್ಣ, ಬೆಸ್ಕಾಂ ಎ.ಇ.ಇ. ಜಯಣ್ಣ, ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!