ವಿದ್ಯಾರ್ಥಿಗಳಿಂದಲೇ ಮಕ್ಕಳ ದಿನಾಚರಣೆ

ವಿದ್ಯಾರ್ಥಿಗಳಿಂದಲೇ ಮಕ್ಕಳ ದಿನಾಚರಣೆ

ಮಲೇಬೆನ್ನೂರು, ನ. 20- ಪಟ್ಟಣದ ಸರ್ಕಾರಿ ಪಿಯು ಕಾಲೇಜ್‍ನ ಪ್ರೌಢಶಾಲಾ ವಿಭಾಗ ದಲ್ಲಿ ವಿದ್ಯಾರ್ಥಿಗಳಿಂದ ಜವಾಹರಲಾಲ್ ನೆಹರೂರವರ 133 ನೇ ಜಯಂತಿ ಮತ್ತು ಮಕ್ಕಳ ದಿನಾಚರಣೆಯು ವಿದ್ಯಾರ್ಥಿ ಸಂಸತ್‍ನ ಪ್ರಧಾನ ಮಂತ್ರಿ ನಿಖಿಲ್ ಅಧ್ಯಕ್ಷತೆಯಲ್ಲಿ ಜರುಗಿತು. 

ವಿದ್ಯಾರ್ಥಿ ಸಂಸತ್‍ನ ವಸಂತ್‍ಕುಮಾರ್, ನಿಖಿಲ್, ದರ್ಶನ್, ಸಹನಾ, ಸ್ವಪ್ನ, ಸುಹಾನಾ ಬಾನು, ಪ್ರಗತಿ, ಮಲ್ಲಿಕ್‍ರೆಹಾನ್, ರಿಜ್ವಾನ್, ಅಫ್ರಿನ್‍ತಾಜ್, ಸುಭಾಷ್, ವರ್ಷಿತ, ಸಂತೋಷ್, ಜಮಾಲ್‍ಬಿ  ಇತರರು ಚಾಚಾ ನೆಹರೂ ಮತ್ತು  ಮಕ್ಕಳ ದಿನಾಚರಣೆ ಕುರಿತು ಮಾತನಾಡಿದರು.

ಉಪಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್, ಎಸ್‍ಡಿಎಂಸಿ ಸದಸ್ಯ ಎಚ್.ಎಂ. ಸದಾನಂದ, ಶಿಕ್ಷಕರಾದ ಸುರೇಶ್ ಮೂಲಿಮನಿ, ನಾಗರಾಜ್ ನಾಯ್ಕ್, ಬಾಲರಾಜ್ ಹಾಗೂ ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. 

error: Content is protected !!