ಜಿಗಳಿ ಹಾ.ಉ.ಸ.ಸಂಘದ ಕಟ್ಟಡ ಕಾಮಗಾರಿಗೆ ಧರ್ಮಸ್ಥಳದಿಂದ ನೆರವು

ಜಿಗಳಿ ಹಾ.ಉ.ಸ.ಸಂಘದ ಕಟ್ಟಡ ಕಾಮಗಾರಿಗೆ ಧರ್ಮಸ್ಥಳದಿಂದ ನೆರವು

ಮಲೇಬೆನ್ನೂರು,  ನ. 19-  ಜಿಗಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 2 ಲಕ್ಷ ರೂ.ಗಳ ಡಿಡಿಯನ್ನು ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಅವರು ಸಂಘದ ಅಧ್ಯಕ್ಷ ಜಿ.ಎಂ. ವೀರನಗೌಡ ಅವರಿಗೆ ನೀಡಿದರು. 

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿದರು.ಗ್ರಾಮದ ಮುಖಂಡ ಗೌಡ್ರ ಬಸವರಾಜಪ್ಪ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ. ಹನುಮಗೌಡ, ಪತ್ರಕರ್ತ ಪ್ರಕಾಶ್, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿಗಳಾದ ಮಮತಾ, ನಾಗರತ್ನ, ಎ. ಒಕ್ಕೂಟದ ಅಧ್ಯಕ್ಷ ಎಂ.ಬಿ. ರುದ್ರಗೌಡ, ಉಪಾಧ್ಯಕ್ಷ ನಾಗಸನಹಳ್ಳಿ ಬಸವರಾಜ್, ಬಿ ಒಕ್ಕೂಟದ ಅಧ್ಯಕ್ಷ ವಿ.ಡಿ. ಕೃಷ್ಣ,
ವಿಜಯ ಭಾಸ್ಕರ್, ಹಾ.ಸ.ಸಂಘದ ಕಾರ್ಯದರ್ಶಿ ಎಂ. ಶಿವಾನಂದಪ್ಪ, ಸಹಾಯಕ ಎಂ.ಎನ್. ರುದ್ರೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!