ಗುತ್ತೂರು ಅಂಗನವಾಡಿ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಭೇಟಿ, ಪರಿಶೀಲನೆ

ಗುತ್ತೂರು ಅಂಗನವಾಡಿ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಭೇಟಿ, ಪರಿಶೀಲನೆ

ಹರಿಹರ, ನ.19- ಗುತ್ತೂರು ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ನಿನ್ನೆ ಭೇಟಿ ಕೊಟ್ಟು ಶಾಲೆಯಲ್ಲಿರುವ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಕಡತಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಶಾಲಾ ಮಕ್ಕಳಿಗೆ ಹಾಕಿರುವ ಸಮವಸ್ತ್ರ ಹಾಗೂ ಶಾಲೆಯ ಆವರಣದಲ್ಲಿ ಹಸಿರಿನಿಂದ ಕೂಡಿದ ಗಿಡ ಮರಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಗುಣಮಟ್ಟದ ಆಹಾರ, ಸ್ವಚ್ಚತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಶಿಶು ಅಭಿವೃದ್ಧಿ‌ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ವಾಸಂತಿ ಉಪ್ಪಾರ್, ತಾಲ್ಲೂಕು ಅಧಿಕಾರಿ ಪೂರ್ಣಿಮಾ, ಮೇಲ್ವಿಚಾರಕರಾದ ಮಂಜುಳಾ, ವಿ.ಎ. ಪ್ರಭು, ಅಂಗನವಾಡಿ ಶಿಕ್ಷಕಿ ಬಿ.ಎಸ್. ನಿರ್ಮಲ, ಸಹಾಯಕಿ ನೇತ್ರಾವತಿ ಹಾಗು ಇತರರು ಹಾಜರಿದ್ದರು.

error: Content is protected !!