ಕುಲ ಕುಲವೆಂದು ಹೊಡೆದಾಡದಿರಿ, ಮಾನವರೆಲ್ಲಾ ಒಂದೇ

ಕುಲ ಕುಲವೆಂದು ಹೊಡೆದಾಡದಿರಿ, ಮಾನವರೆಲ್ಲಾ ಒಂದೇ

ಉಚ್ಚಂಗಿದುರ್ಗದ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದ ಸ್ವಾಮೀಜಿ

ಹರಪನಹಳ್ಳಿ, ನ. 19- ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ನೂತನವಾಗಿ ಕಟ್ಟಿಸಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೂಜೆಯನ್ನು ನೆರವೇರಿಸಿದ ರಾಜಗುರು ಕಟ್ಟಿಮನೆ ಶ್ರೀ ರೇವಣಸಿದ್ಧ ಮಹಾ ಸ್ವಾಮಿಗಳು ಮಾತನಾಡಿ, ಎಲ್ಲರ ಆಚಾರ, ವಿಚಾರದಲ್ಲಿ ಬೇರೆ ಬೇರೆ ಇರಬಹುದು ಆದರೆ ಮನುಷ್ಯರಲ್ಲಿ ಅತೀ ಆಸೆ ಇರಬಾರದು. ಅತೀ ಆಸೆ ದುಃಖಕ್ಕೆ ಮೂಲ ಎಂದರು.

ಕಳ ಬೇಡ, ಕೊಲ ಬೇಡ ,ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ  ಅಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮ ದೇವನೊಲಿಸುವ ಪರಿ ಎಂದು ಬಸವಣ್ಣನವರು 12 ನೇ ಶತಮಾನದಲ್ಲಿಯೇ ಹೇಳಿದ್ದಾರೆ. ನಾವೆಲ್ಲರೂ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಾಲಿಸೋಣ, ಕುಲ ಕುಲವೆಂದು ಹೊಡೆದಾಡ ಬೇಡಿ ಮಾನವರೆಲ್ಲ ಒಂದೇ ಎಂದು ಹೇಳಿದರು.

ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ  ಸಂಸ್ಥಾಪಕ ಬಿ.ಜಿ. ವಿನಯ್ ಕುಮಾರ್ ಮಾತನಾಡಿ, ಗುಡಿ ಕಟ್ಟುವುದು ಮುಖ್ಯವಲ್ಲ, ದಾರ್ಶನಿಕರ ತತ್ವ, ಸಿದ್ಧಾಂತಗಳನ್ನು ಪಾಲಿಸಬೇಕು. ದೇವಸ್ಥಾನಕ್ಕೆ ಖರ್ಚು ಮಾಡುವಷ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಹತ್ತು ಪಟ್ಟು ಖರ್ಚು ಮಾಡಬೇಕು, ಓದಿ ಉನ್ನತ ಹುದ್ದೆಗೆ ಹೋದರೆ, ನಮ್ಮ ಸಮಾಜ ಮುಂದೆ ಬರಲು ಸಾಧ್ಯ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ್ ಸ್ವಾಮಿ, ಸಿದ್ದಣ್ಣ, ಕಮಲವ್ವರ ಹನುಮಂತಪ್ಪ, ಶಿಕ್ಷಕ ಚಂದ್ರಪ್ಪ, ಮಡ್ರಳ್ಳಿ ಕೆಂಚಪ್ಪ, ಯುವರಾಜ್, ರೇವಣಪ್ಪ, ಹಾಲೇಶಪ್ಪ, ಕಂತೆಪ್ಪರ ಹನುಮಂತಪ್ಪ, ಶಿವಕುಮಾರ್, ಶರತ್ ಮತ್ತು  ಇತರರು ಹಾಜರಿದ್ದರು.

error: Content is protected !!