- ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದ ಶಾಸಕ ಹರೀಶ್
- ಸಂಸದ ಜಿ.ಎಂ. ಸಿದ್ದೇಶ್ವರ, ಶಿವಶಂಕರ್, ರೇಣುಕಾಚಾರ್ಯ ಮೆರವಣಿಗೆಯಲ್ಲಿ ಭಾಗಿ
ಮಲೇಬೆನ್ನೂರು, ಅ.2- ಇಲ್ಲಿನ ನೀರಾವರಿ ಇಲಾಖೆಯ ಆವರಣದಲ್ಲಿ ಪ್ರತಿಷ್ಟಾಪಿಸಿದ್ದ ಹಿಂದೂ ಮಹಾಗಣಪತಿ ಯನ್ನು ಬೃಹತ್ ಶೋಭಾಯಾತ್ರೆ ಮೂಲಕ ಇಂದು ವಿಸರ್ಜನೆಗೊಳಿಸಲಾಯಿತು.
ನೀರಾವರಿ ಇಲಾಖೆ ಆವರಣದಿಂದ ಆರಂಭಗೊಂಡ ಶೋಭಾಯಾತ್ರೆಗೆ ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಹಿಂದೂ ಮಹಾಗಣಪತಿ ಅಧ್ಯಕ್ಷ ವೈ. ಚಂದ್ರಶೇಖರ್ ಸೇರಿದಂತೆ, ಅನೇಕ ಮುಖಂಡರು ಹಾಜರಿದ್ದು, ಚಾಲನೆ ನೀಡಿದರು.
ಮೆರವಣಿಗೆ ಬೆಸ್ಕಾಂ ಕಛೇರಿ ಬಳಿ ಬಂದಾಗ ಯುವಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಡಿಜೆ ಸಂಗೀತಕ್ಕೆ ಕುಣಿಯುತ್ತಾ ಸಾಗಿದರು. ಪಟ್ಟಣದ ಮುಖ್ಯ ವೃತ್ತದಲ್ಲಿ ಮೆರವಣಿಗೆ ನೋಡಲು ಸಾವಿರಾರು ಮಹಿಳೆಯರು, ಮಕ್ಕಳು ಬಿಲ್ಡಿಂಗ್ಗಳ ಮೇಲೆ ಕಾದು ನಿಂತಿದ್ದರು. ಅಷ್ಟೇ ಅಲ್ಲದೇ, ಮುಖ್ಯ ವೃತ್ತದಲ್ಲಿ ನೂರಾರು ಮಹಿಳೆಯರು-ಬಾಲಕಿಯರು ಡಿಜೆ ಸಂಗೀತಕ್ಕೆ ಕುಣಿದು ಸಂಭ್ರಮಿಸಿದರು.
ಶಾಸಕ ಬಿ.ಪಿ. ಹರೀಶ್ ಕೆಲಹೊತ್ತು ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ಟ್ರ್ಯಾಕ್ಟರ್ ಮೇಲೆ ನಿಂತು ಕುಣಿಯುವ ಮೂಲಕ ಗಮನ ಸೆಳೆದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ಸಂಜೆ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಂದಾಪುರದ ಚಂಡಿ ಮೇಳದವರೊಂದಿಗೆ ತಾಳ ಹಿಡಿದು ನೃತ್ಯ ಮಾಡಿ ಆಕರ್ಷಿಸಿದರು. ಫ್ಲವರ್ ಬ್ಲಾಸ್ಟಿಂಗ್ ಮತ್ತು ಯುವಕ-ಯುವತಿಯರನ್ನು ಒಳಗೊಂಡ ಕುಂದಾಪುರದ ಚಂಡಿ ಮೇಳ ಮತ್ತು ಖಳ ನಟ ಕೆಜಿಎಫ್ ಗಣೇಶ್ ಅವರೂ ಮೆರವಣಿಗೆಯಲ್ಲಿ ವಿಶೇಷವಾಗಿದ್ದರು.
ಮೆರವಣಿಗೆಯು ರಾಜಬೀದಿಗಳ ಮಾರ್ಗವಾಗಿ ಭದ್ರಾ ಚಾನಲ್ಗೆ ತೆರಳಿ ಅಂತ್ಯಗೊಂಡಿತು. ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಮಹಾಗಣಪತಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ವೀರಯ್ಯ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಬಿ. ಮಂಜುನಾಥ್, ಕೆ.ಜಿ. ಲೋಕೇಶ್, ಭೋವಿ ಶಿವು, ಬಿ. ಸುರೇಶ್, ಕೆ.ಪಿ. ಗಂಗಾಧರ್, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್, ಭೋವಿ ಕುಮಾರ್, ಪಿ.ಆರ್. ರಾಜು, ಮುಖಂಡರಾದ ಮುದೇಗೌಡ್ರ ತಿಪ್ಪೇಶ್, ಕೆ.ಜಿ. ವೀರನಗೌಡ್ರು, ಕೆ.ಜಿ. ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ, ಹುಳ್ಳಳ್ಳಿ ಸಿದ್ದೇಶ್, ತಳಸದ ಬಸವರಾಜ್, ಉಡೇದರ್ ಸಿದ್ದೇಶ್, ಕೆ.ಜಿ. ರಂಗನಾಥ್, ಸುರೇಶ್ ಶಾಸ್ತ್ರಿ, ಓ.ಜಿ. ಧನು, ಭೋವಿ ಮಂಜಣ್ಣ, ಪಿ.ಆರ್ ಕುಮಾರ್, ಸುಬ್ಬಿ ರಾಜಣ್ಣ, ಎ. ಆರೀಪ್ ಅಲಿ, ಬಿ.ಚಂದ್ರಪ್ಪ, ಜಿಗಳಿ ಹನುಮಗೌಡ, ಪ್ರಕಾಶ್ಚಾರ್, ಬಟ್ಟೆ ಅಂಗಡಿ ವಿಶ್ವ, ನ್ಯಾಯಬೆಲೆ ಅಂಗಡಿ ಮಂಜಣ್ಣ, ಪಾಳೇ ಗಾರ್ ನಾಗರಾಜ್, ಎ.ಕೆ. ಲೋಕೇಶ್, ಎ.ಕೆ. ನಾಗರಾಜ್, ಕಿರಣ್, ಸಂಜಯ್, ಆಕಾಶ್, ಕಜ್ಜರಿ ಹರೀಶ್, ಕುಮಾರನಹಳ್ಳಿ ಸುನೀಲ್, ಚಾಮುಂಡಿ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಕುಂಬಳೂರು ವಾಸು, ಸೇರಿದಂತೆ ಇನ್ನೂ ನೂರಾರು ಪ್ರಮು ಖರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅನ್ನ ಸಂತರ್ಪಣೆ : ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ರೈತ ಭವನದಲ್ಲಿ ಇಡೀ ದಿನ ನಿರಂತರವಾಗಿ ಗೋಧಿ ಪಾಯಸ, ಅನ್ನ-ಸಾಂಬಾರ್, ಪಲ್ಯ ದಾಸೋಹ ನಡೆಯಿತು.
ಇದಲ್ಲದೇ ಪೊಲೀಸ್ ಠಾಣೆ ರಸ್ತೆಯಲ್ಲಿ ಬಂಗಾರದ ಅಂಗಡಿ ರಾಜು ಅವರು ತಮ್ಮ ಪತ್ನಿ ಶ್ರೀಮತಿ ಸುಮ ಸ್ಮರಾಣಾರ್ಥ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ವರ್ತಕ ಹಾಗೂ ಎಸ್ಡಿಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಚಿಟ್ಟಕ್ಕಿ ರಮೇಶ್, ಮಹಾಂತೇಶ್ ಸ್ವಾಮಿ, ಶಿಕ್ಷಕ ಕುಮಾರ್, ಪೊಲೀಸ್ ಮಂಜು ಮತ್ತಿತರರು ಸೇರಿ ಸುಮಾರು 15 ಸಾವಿರ ಲಡ್ಡು ಉಂಡಿ ವಿತರಿಸಿದರು.
ಮುಖ್ಯ ವೃತ್ತದಲ್ಲಿ ಮೆಡಿಕಲ್ ಷಾಪ್ ನಂದಿಗಾವಿ ರಾಜೀವ್, ತಳಸದ ಸಂತೋಷ್, ಆನಂದ್ಚಾರ್, ರಂಗನಾಥ್ ಗುಪ್ತಾ ಮಾಗನಹಳ್ಳಿ ಶರಣ್, ಪೊಲೀಸ್ ಸಂತೋಷ್ ಸೇರಿದಂತೆ ಇನ್ನೂ ಅನೇಕರು ಸೇರಿ ಗೆಳೆಯರ ಬಳಗದ ವತಿಯಿಂದ ಫುಡ್ ಪ್ಯಾಕೇಟ್ ಹಂಚಿದರು.
ಬಿಗಿ ಬಂದೋಬಸ್ತ್ : ಸಂಜೆ ಪಟ್ಟಣಕ್ಕೆ ಆಗಮಿಸಿದ ಎಸ್ಪಿ ಉಮಾ ಪ್ರಶಾಂತ್ ಅವರು ಸ್ವಲ್ಪ ಹೊತ್ತು ಮೆರವಣಿಗೆ ಸಾಗುವ ಮಾರ್ಗದಲ್ಲಿದ್ದರು. ಎಎಸ್ಪಿ ಬಸರಗಿ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ಹರಿಹರ ಸಿಪಿಐ ಪ್ರಭು ಕೆಳಗಿನ ಮನಿ ಅವರ ನೈತೃತ್ವದಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಮತ್ತು ಅವರ ಅಧಿಕಾರಿಗಳೂ ಕೂಡಾ ಮರವಣಿಗೆಯಲ್ಲಿ ಹಾಜರಿದ್ದರು.