ದಾವಣಗೆರೆ, ಅ.2- ಹಳೇಪೇಟೆಯ ಶತಮಾನದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಹಳೇಪೇಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಚಂದನ್ ಸಿ.ಆರ್. (ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ), ಶಿವಾಜಿರಾವ್ ಎ. (ಕಥೆ ಹೇಳುವುದರಲ್ಲಿ ಪ್ರಥಮ), ಬೃಂದಾ ಆರ್. (ಅಭಿಯನ ಗೀತೆಯಲ್ಲಿ ಪ್ರಥಮ), ವಿ. ಅಭಿಷೇಕ್ (ಕವನ ವಾಚನದಲ್ಲಿ ತೃತೀಯ), ಅರ್ಚನ ಹೆಚ್.ಎನ್. (ಕನ್ನಡ ಕಂಠಪಾದಲ್ಲಿ ತೃತೀಯ), ಭುವನ್ (ಕಥೆ ಹೇಳುವುದರಲ್ಲಿ ತೃತೀಯ) ವಿಜೇತರಾಗಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಲೆಯ ಇಂಗ್ಲಿಷ್ ಶಿಕ್ಷಕಿ ಎಂ.ಎನ್. ನಮಿತಾ, ಆರ್.ಸಿ. ಅನುಸೂಯ ಇತರರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು.
ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯ ಲೋಕಣ್ಣ ಮಾಗೋಡ್, ಎಸ್ ಡಿಎಂಸಿ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್, ಎಂ.ಎನ್. ನಮಿತಾ, ಆರ್.ಸಿ. ಅನಸೂಯ, ಸುಜಾತ ಅವರು ಪ್ರಶಸ್ತಿ ಪತ್ರ ವಿತರಿಸಿ ಅಭಿನಂದನೆ ಸಲ್ಲಿಸಿದರು.
ಸುಜಾತ, ಸಂಪತ್ ಕುಮಾರಿ, ವಿಜಯಕುಮಾರಿ, ಜಯಶ್ರೀ, ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.