ಹರಿಹರ : ಕಾಂಗ್ರೆಸ್‌ನಿಂದ ಪೌರ ಕಾರ್ಮಿಕರಿಗೆ ಸನ್ಮಾನ

ಹರಿಹರ : ಕಾಂಗ್ರೆಸ್‌ನಿಂದ ಪೌರ ಕಾರ್ಮಿಕರಿಗೆ ಸನ್ಮಾನ

ಹರಿಹರ, ಅ. 2- ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಗಿರಿಯಮ್ಮ ಕಾಲೇಜ್ ಹತ್ತಿರವಿರುವ ಪಕ್ಷದ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜೀಯವರ ಜಯಂತಿ  ಆಚರಿಸಲಾಯಿತು.  ಊರಿನ ಸ್ವಚ್ಚತೆಗೆ  ಶ್ರಮಿಸುತ್ತಿರುವ ನಗರದ ಪೌರ ಕಾರ್ಮಿಕರನ್ನು ಯುವ ಮುಖಂಡ ಎನ್.ಹೆಚ್. ಶ್ರೀನಿವಾಸ್‌ ನೇತೃತ್ವದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಕೆ. ಜಡಿಯಪ್ಪ, ಟಿ.ಜಿ.ಮುರುಗೇಶಪ್ಪ, ನಗರಸಭಾ ಸದಸ್ಯರಾದ ಬಾಬುಲಾಲ್, ಸುಮಿತ್ರಮ್ಮ ಮರಿದೇವ, ಕಾಂಗ್ರೆಸ್ ಮುಖಂಡ ಭಾನುವಳ್ಳಿ ಕನ್ನಪ್ಪ, ಮಲೇಬೆನ್ನೂರು ಜಾಕೀರ್ ರಹಮತ್ ಉಲ್ಲಾ,  ದಾದಾಪೀರ್ ಭಾನುವಳ್ಳಿ, ಎಂ.ಎಸ್.ಆನಂದ್ ಕುಮಾರ್,  ವೈ. ಮಲ್ಲಿನಾಥ, ಪ್ರಕಾಶ, ಮಲ್ಲೇಶ್,  ಅರುಣ್ ಬೊಂಗಾಳೆ, ಹೆಚ್.ಶಿವಪ್ಪ, ಭಾಗ್ಯದೇವಿ, ಹರಿಣಿ ನಾಗಮ್ಮ, ವೆಂಕಟೇಶ್ ಶೆಟ್ಟಿ, ನಿಧಿ, ನಾರಾಯಣ, ವಿಜಯಕುಮಾರ್, ಇತರರು ಭಾಗವಹಿಸಿದ್ದರು.

error: Content is protected !!