ಹರಿಹರದ ದಸರಾ ಉತ್ಸವಕ್ಕೆ ಸರ್ಕಾರ ಅನುದಾನ ನೀಡಲಿ

ಹರಿಹರದ ದಸರಾ ಉತ್ಸವಕ್ಕೆ ಸರ್ಕಾರ ಅನುದಾನ ನೀಡಲಿ

ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್ ಒತ್ತಾಯ

ಹರಿಹರ, ಅ. 1 – ದಸರಾ ಮಹೋತ್ಸವವನ್ನು ಧಾರ್ಮಿಕ ಪರಂಪರೆ ಹಾಗೂ ಸಾಂಸ್ಕೃತಿಕ ವಿಧಿ ವಿಧಾನಗಳೊಂದಿಗೆ, ಶ್ರದ್ಧಾ ಭಕ್ತಿಯಿಂದ ಮತ್ತು ವೈಭವದಿಂದ ಆಚರಣೆ ಮಾಡೋಣ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಶ್ರೀ ಓಂಕಾರ ಮಠದ ಆವರಣದಲ್ಲಿ ದಸರಾ ಮಹೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಎಲ್ಲಾ ದೇವರುಗಳು ಒಂದೇ ಸಮಯಕ್ಕೆ ಆಗಮಿಸುವಂತೆ ತೀರ್ಮಾನ ಕೈಗೊಳ್ಳಬೇಕು. ಬಹುತೇಕ ಭಕ್ತರು ಮೆರವಣಿಗೆಯನ್ನು ರಸ್ತೆಯ ಬದಿಯಲ್ಲಿ ನಿಂತು ವೀಕ್ಷಣೆ ಮಾಡುವುದು ಬಿಟ್ಟು, ಮೆರವಣಿಗೆಯಲ್ಲಿ ಪಾಲ್ಗೊಂಡರೆ ಮೆರವಣಿಗೆ ಇನ್ನಷ್ಟು ಅರ್ಥಪೂರ್ಣವಾದ ಶೋಭಾಯಾತ್ರೆ ಯಾಗುತ್ತದೆ ಎಂದು ಹೇಳಿದರು.

ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ, ಭಾವೈಕ್ಯತೆ ಬೆಸೆಯುವ ಮತ್ತು ಧರ್ಮವನ್ನು ಎತ್ತಿ ಹಿಡಿಯುವ ದಸರಾ ಮಹೋತ್ಸವವನ್ನು ನಗರದಲ್ಲಿ ಕಳೆದ 19  ವರ್ಷಗಳಿಂದ ಸತತವಾಗಿ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾ ಗುತ್ತದೆ. ಆದರೆ ಸರ್ಕಾರ ಮೈಸೂರು ಮತ್ತು ಮಡಿಕೇರಿ ನಗರದಲ್ಲಿ ನಡೆಯುವ ದಸರಾ ಮಹೋತ್ಸವ ಆಚರಣೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಅಲ್ಲಿ ಅನು ದಾನ ಬಿಡುಗಡೆ ಮಾಡಿದಂತೆ ಹರಿಹರ ನಗರ ದಲ್ಲಿ ಆಚರಿಸುವ ದಸರಾ ಮಹೋತ್ಸವಕ್ಕೂ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 

ಪಂಡಿತ ನಾರಾಯಣ ಜೋಯಿಸರು ಮಾತನಾಡಿ,  ಸೂರ್ಯಾಸ್ತ ಆಗುವ ಮೊದಲು ಬನ್ನಿ ಮುಡಿಯಬೇಕು. ತದನಂತರ ಮುಡಿದರೆ ಅದರ ಫಲ ಕಡಿಮೆ ಇರುತ್ತದೆ. ಹಾಗಾಗಿ ಸಮಿತಿಯವರು ಈ ಬಗ್ಗೆ  ಗಮನ ಕೊಡಬೇಕು. ಮಳೆ ಇಲ್ಲದೆ ಇರೋದರಿಂದ ಮಳೆಗೆ ಪ್ರಾರ್ಥಿಸಿ ವಿಶೇಷ ಪೂಜೆ ಮಾಡಲಾಗುತ್ತದೆ. ಈ ಬಾರಿ ದಸರಾ ಮಹೋತ್ಸವ 22 ರಂದು ದುರ್ಗಾಷ್ಟಮಿ, 23 ಕ್ಕೆ ಕಂಡಾ ಪೂಜೆ, 24 ಬನ್ನಿ ಪೂಜೆ ನಡೆಯುತ್ತದೆ ಎಂದು ಹೇಳಿದರು. 

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸಿ.ಎನ್. ಹುಲುಗೇಶ್ ಮಾತನಾಡಿದರು. 

ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಮಾತನಾಡಿ, ವರ್ಷದಲ್ಲಿ ಮೂರು ನವರಾತ್ರಿಗಳು ಶ್ರೇಷ್ಠ. ಅದರಲ್ಲಿ ವಸಂತ ನವರಾತ್ರಿ, ಶರನ್ನವರಾತ್ರಿ, ಬನಶಂಕರಿ ನವರಾತ್ರಿ. ಅದರಲ್ಲಿ ಶರನ್ನವರಾತ್ರಿ ಹಬ್ಬವು ಪ್ರಕೃತಿ ಸುಂದರವಾಗಿ ಮತ್ತು ಮನಸ್ಸು ಅಗಾಧವಾಗಿ ಇದ್ದಾಗ ಶರನ್ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ಆಚರಣೆ ಮಾಡುವುದರಿಂದ ಶಕ್ತಿ ಮತ್ತು ಜ್ಞಾನ ಸಂಪತ್ತು ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಮರಾವತಿ ಗೌಡ್ರು ಮಾಹದೇವಪ್ಪ,  ಆರ್.ಐ ಆನಂದ್, ವೆಂಕಟೇಶ್,  ಟಿ.ಜೆ. ಮುರುಗೇಶಪ್ಪ, ರೇವಣಸಿದ್ದಪ್ಪ ಅಮರಾವತಿ, ಅಜಿತ್ ಸಾವಂತ್, ಐರಣಿ ನಾಗರಾಜ್, ರಮೇಶ್ ನಾಯ್ಕ್, ಶಿವಪ್ರಕಾಶ್ ಶಾಸ್ತ್ರಿ, ಹರಿಶಂಕರ್ ಜೋಯಿಸರು, ಗೋಪಾಲ ದುರಗೋಜಿ, ಅಂಬಾಸ ಹಂಸಾಗರ, ವೆಂಕಟೇಶ್ ಶೆಟ್ಟಿ, ಹಲಸಬಾಳು ಬಸವರಾಜಪ್ಪ, ಕೆ. ಜಡಿಯಪ್ಪ, ಜಿ.ಕೆ. ವೀರಣ್ಣ,  ರಾಘವೇಂದ್ರ, ಪ್ರಕಾಶ್ ಕೋಳೂರು, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಕರಿಬಸಪ್ಪ ಕಂಚಿಕೇರಿ ರೂಪಾ ಶಶಿಕಾಂತ್, ಮಾಜಿ ನಗರಸಭೆ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ, ಎ.ಬಿ. ವಿಶ್ವನಾಥ್, ಬೊಂಗಾಳಿ ಅರುಣ್‌ ಕುಮಾರ್ ಗಿರೀಶ್ ಗೌಡ, ಶೇರಾಪುರ ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ, ಪ್ರಮೀಳ ನಲ್ಲೂರು, ಸರೋಜ ಬಾಯಿ ಭೂತೆ, ಅಂಬುಜಾ ರಾಜೊಳ್ಳಿ, ಸುರೇಖಾ ಅರುಣ್ ಬೊಂಗಾಳೆ, ರತ್ನ ಅಂಬಾಸಾ, ಭಾಗ್ಯಮ್ಮ, ಮಾಲಾ, ನಾಗಮ್ಮ, ಪ್ರಕಾಶ್ ಶೆಟ್ಟಿ, ಶ್ರೀನಿವಾಸ್ ಮೆಹರ್ವಾಡೆ, ರೆಡ್ಡಿ ಹನುಮಂತಪ್ಪ, ಗುರುಪ್ರಸಾದ್ ಕುಲಕರ್ಣಿ, ಭವಾನಿ ಶಂಕರ್ ಇತರರು ಹಾಜರಿದ್ದರು.       

error: Content is protected !!