ಹರಿಹರದಲ್ಲಿ ಇಂದು ಪ್ರವಾದಿ ಮುಹಮ್ಮದ್‌ರ ವಿಚಾರಗೋಷ್ಠಿ

ಹರಿಹರದಲ್ಲಿ ಇಂದು ಪ್ರವಾದಿ ಮುಹಮ್ಮದ್‌ರ ವಿಚಾರಗೋಷ್ಠಿ

ಹರಿಹರ, ಅ.1  – ರಾಬಿತಾ-ಎ-ಮಿಲ್ಲತ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಹರಿಹರ ಘಟಕ ಆಶ್ರಯದಲ್ಲಿ ನಗರದ ಆರೋಗ್ಯ ಮಾತೆ ಚರ್ಚ್ ಆವರಣದ ಮರಿಯಾ ಸದನದಲ್ಲಿ ನಾಳೆ ದಿನಾಂಕ 2 ರ ಸೋಮವಾರ ಸಂಜೆ 7ಕ್ಕೆ ಸೀರತ್ ಅಭಿಯಾನ-2023 ಪ್ರಯುಕ್ತ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ ವಿಷಯ ಕುರಿತು ವಿಚಾರ ಗೋಷ್ಠಿ ಆಯೋಜಿಸಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಡಾ.ಗುಲಾಮ್ ನಬಿ ಸಾಬ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಆರೋಗ್ಯ ಮಾತೆ ಚರ್ಚ್ ಪ್ರಧಾನ ಧರ್ಮಗುರು ಫಾ. ಕೆ.ಎ. ಜಾಜ್ ಸಾನ್ನಿಧ್ಯ ವಹಿಸುವರು.

ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಮಾಅತೆ ಇಸ್ಲಾಮಿ ಹಿಂದ್‍ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಅಧ್ಯಕ್ಷತೆ ವಹಿಸುವರು.

ಜಮಾಅತೆ ಇಸ್ಲಾಮಿ ಹಿಂದ್
ಹರಿಹರ ಘಟಕ ಅಧ್ಯಕ್ಷ ಅಬ್ದುಲ್ ಖಯೂಮ್ ವೈ.ಜಿ., ರಾಬಿತಾ-ಎ-ಮಿಲ್ಲತ್ ಹರಿಹರ ಘಟಕ ಅಧ್ಯಕ್ಷ ಸೈಯದ್ ಮುನೀರ್ ಸಾಬ್, ಪರಸ್ಪರ ಬಳಗದ ಅಧ್ಯಕ್ಷ ರಿಯಾಜ್ ಅಹ್ಮದ್ ಎ., ಮೊಹಮ್ಮದ್ ಅಶ್ಫಾಖ್, ಮೊಹ್ಮದ್ ಇಖ್ಬಾಲ್ ಸಾಬ್ ಮಕಾಂದಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!