ಹರಪನಹಳ್ಳಿ, ಸೆ. 28- ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ವತಿಯಿಂದ ಗುರುವಾರ ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಿದರು.
ಸಾರ್ವಜನಿಕ ಆಸ್ಪತ್ರೆ, ಸನ್ರೈಸ್ ಆಸ್ಪತ್ರೆ, ಆರೋಗ್ಯ ಮಾತಾ ಮತ್ತು ಅನಾಥ ಮಕ್ಕಳಿಗೆ, ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೆ.ಎಸ್. ಉಸ್ಮಾನ್, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಖಜಾಂಚಿ ಷರೀಫ ಮಕರಬ್ಬಿ ಮಾತನಾಡಿದರು.
ಕಾರ್ಯದರ್ಶಿ ಸಲೀಂ, ಖಜಾಂಚಿ ರಫೀಕ್ ಅಹ್ಮದ್, ಹಡಗಲಿಯ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್. ಮುಸ್ತಫಾ, ಅರ್ಜುಮುನ್ನೀಸಾ ಬೇಗಂ, ಎನ್. ಇಸ್ಮಾಯಿಲ್ ಸಾಬ್, ಎಂ. ಯಾಹ್ಯಾ, ಎಸ್. ಅತಾವುಲ್ಲಾ, ಪೀರ್ ಸಾಬ್, ನೂರುಲ್ಲಾ, ನಜೀರ್, ದಾದಾಪೀರ್ ಪಿ.ಇ., ಅಸ್ಲಂಭಾಷಾ ತೆಲಗಿ, ರುಕ್ಸಾನ, ದಾದಾಪೀರ್, ಹುಸೇನ್ ಪೀರ್, ಅಬುಸಾಲೇಹ, ಅತಾವುಲ್ಲಾ, ಜಮಾಲ್, ಶಬ್ಬೀರ್ ಕೆ., ಮನ್ಸೂರ್ ಅಹ್ಮದ್, ಶಿಕ್ಷಕರ ಸಂಘದ ಪದಾಧಿಕಾರಿ ಎಂ. ದಾದಾ ಖಲಂದರ್, ಮಹಬೂಬ್ ಬಡಗಿ, ದಾವಲ್ ಸಾಬ್, ಮುಷ್ತಾಕ್ ಅಲಿ, ಅಲ್ಲಾಭಕ್ಷ, ದಾದಾಪೀರ್, ಎಸ್. ಶಫಿ ಇತರರು ಉಪಸ್ಥಿತರಿದ್ದರು.