ಎಸ್ಸೆಸ್ಸೆಂ ಜನ್ಮ ದಿನದ ಪ್ರಯುಕ್ತ ಪತ್ರಿಕಾ ವಿತರಕರಿಗೆ ಜರ್ಕಿನ್‍ಗಳ ವಿತರಣೆ

ಎಸ್ಸೆಸ್ಸೆಂ ಜನ್ಮ ದಿನದ ಪ್ರಯುಕ್ತ ಪತ್ರಿಕಾ ವಿತರಕರಿಗೆ ಜರ್ಕಿನ್‍ಗಳ ವಿತರಣೆ

ದಾವಣಗೆರೆ, ಸೆ.21- ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 56ನೇ ಜನ್ಮ ದಿನದ ಪ್ರಯುಕ್ತ ಎಸ್.ಎಸ್.ಎಂ. ಅಭಿಮಾನಿಗಳ ಬಳಗದ ವತಿಯಿಂದ ಪತ್ರಿಕಾ ವಿತರಕರಿಗೆ ಜರ್ಕಿನ್‌ಗಳನ್ನು ವಿತರಿಸಲಾಯಿತು.

ನಿನ್ನೆ ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ಜರ್ಕಿನ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು, ಮಲ್ಲಿಕಾರ್ಜುನ್ ಅವರು ಜನಾನುರಾಗಿ ನಾಯಕರಾಗಿದ್ದು, ಅವರ ಸೇವೆ ಯಾವಾಗಲೂ ಕಟ್ಟಕಡೆಯ ವ್ಯಕ್ತಿ ತಲುಪುವಂತೆ ಮಾಡುವುದಾಗಿ, ಅವರ ಸೇವಾ ಗುಣವೇ ಅವರನ್ನು ಅಧಿಕಾರಕ್ಕೆ ತಂದಿದೆ. ಅವರ ಜನ್ಮ ದಿನವನ್ನು ಬಡವರಿಗೆ ಉಚಿತ ಸೇವೆ ಸಲ್ಲಿಸುವ ಮೂಲಕ ಅವರ ಅಭಿಮಾನಿಗಳು ಆಚರಿಸುತ್ತಿರುವುದು ಸ್ವಾಗತಾರ್ಹ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ನೇತೃತ್ವ ವಹಿಸಿ ಮಾತನಾಡಿ, ಮಲ್ಲಿಕಾರ್ಜುನ್ ಅವರು ಶಾಸಕರಾಗಿ, ಸಚಿವರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅವರಿಗೆ ಜನಸೇವೆ ಮಾಡುವ ಇನ್ನಷ್ಟು ಶಕ್ತಿ ನೀಡಲಿ ಎಂದು ಆಶಿಸಿದರು.

ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಎಸ್.ಎಸ್.ಎಂ. ಅಭಿಮಾನಿ ಬಳಗದ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರುಗಳು, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!