ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ‌ ಕೊಡುಗೆಯ ಪ್ರತೀಕ

ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ‌ ಕೊಡುಗೆಯ ಪ್ರತೀಕ

ಜಗಳೂರು, ಸೆ.21- ದಸರಾ ಕ್ರೀಡಾಕೂಟ ಮೈಸೂರು ಅರಸರ ಸಾಂಸ್ಕೃತಿಕ ಕೊಡುಗೆಯ ಪ್ರತೀಕ ಎಂದು ಶಾಸಕ‌‌ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ಮಹಾರಾಜರು ನಾಡಹಬ್ಬ ದಸರಾ ವೈಭವವನ್ನು ಸಾಮ್ರಾಜ್ಯದ ಗಡಿಗ್ರಾಮಗಳವರೆಗೂ ಹರಡಿ ಕ್ರೀಡೆ, ಕಲೆ, ಸಂಗೀತ, ಕಲಾ ಕ್ಷೇತ್ರಗಳ ಪ್ರತಿಭೆಗಳಿಗೆ  ಆದ್ಯತೆ ನೀಡಿದ್ದರು. 

ರಾಜ್ಯವ್ಯಾಪಿ ಇಂದಿಗೂ  ದಸರಾ ಹಬ್ಬದ ಅಂಗವಾಗಿ ನಡೆಯುವ ಕ್ರೀಡಾಕೂಟಗಳ ಆಯೋಜನೆಯಿಂದ ಶಾಲಾ-ಕಾಲೇಜುಗಳಿಂದ ಹೊರಗುಳಿದ ಕ್ರೀಡಾಪಟುಗಳಿಗೂ ಸೂಕ್ತ ವೇದಿಕೆಯಾಗಲಿದೆ ಎಂದು ಶ್ಲ್ಯಾಘಿಸಿದರು.

ಆಟದಲ್ಲಿ ನಿರತರಾದ ವೇಳೆ ಅನಗತ್ಯ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ತೀರ್ಪುಗಾರರ ಅಂತಿಮ ತೀರ್ಪನ್ನು ಕ್ರೀಡಾಪಟುಗಳು ಸಮಾನವಾಗಿ  ಸ್ವೀಕರಿಸಬೇಕು. ತಾಲ್ಲೂಕಿನ ಕೀರ್ತಿಗೆ ಪಾತ್ರರಾಗಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುನಿತಾ, ಶ್ರೀಶೈಲ, ರಾಮಲಿಂಗಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ, ಮುಖ್ಯ ಶಿಕ್ಷಕ ಕೆ.ಈಶಪ್ಪ, ಸತೀಶ್ , ಜಿಲ್ಲಾ ಯುವ ಪ್ರಶಸ್ತಿ ವಿಜೇತ ಟಿ.ಬಡಪ್ಪ, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್  ಮತ್ತಿತರರು ಇದ್ದರು.

error: Content is protected !!