ಹರಪನಹಳ್ಳಿಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ : ವಕೀಲರ ಸಂಘದ ಮೆರುಗು

ಹರಪನಹಳ್ಳಿಯಲ್ಲಿ ಅದ್ಧೂರಿ ಗಣೇಶ ವಿಸರ್ಜನೆ : ವಕೀಲರ ಸಂಘದ ಮೆರುಗು

ಹರಪನಹಳ್ಳಿ, ಸೆ.21- ತಾಲ್ಲೂಕು ವಕೀಲರ ಸಂಘ ದಿಂದ ಆಯೋಜಿಸ ಲಾಗಿದ್ದ ಗಣೇಶ ವಿಸರ್ಜನೆ ಕಾರ್ಯ ಕ್ರಮ ಬುಧವಾರ ಅದ್ಧೂರಿ ಜರುಗಿತು.

ಪಟ್ಟಣದ ವಕೀಲರ ಸಂಘ ದಿಂದ  ವಿಧಿ ವಿಧಾನದ ಮೂಲಕ ಪೂಜೆ ಕಾರ್ಯ ಕ್ರಮವನ್ನು ನೆರವೇರಿಸಿ ವಕೀಲರ ಸಂಘದ ಗಣೇಶನ ಮೂರ್ತಿಯನ್ನು ತೆರೆದ ವಾಹನದಲ್ಲಿ ಅದ್ಧೂರಿ ಗಣೇಶ ಘೋಷಣೆಯೊಂದಿಗೆ ಹಿರಿಯ ಮತ್ತು ಕಿರಿಯ ವಕೀಲರುಗಳು ಸಡಗರ, ಸಂಭ್ರಮದಿಂದ ರಸ್ತೆ ಉದ್ದಕ್ಕೂ ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.

ನಂತರ ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಬಾವಿಗೆ ತೆರಳಿ, ವಿಧಿ ವಿಧಾನದ ಮೂಲಕ ಪೂಜಾ ಕಾರ್ಯಕ್ರಮ ನೆರವೇರಿಸಿ ಬಳಿಕ ಸಂಪ್ರದಾಯದಂತೆ ಬಾವಿಯಲ್ಲಿ ಗಣೇಶನ ವಿಸರ್ಜನೆ ಕಾರ್ಯ  ನೆರವೇರಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ, ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ. ಆನಂದ, ಜಂಟಿ ಕಾರ್ಯದರ್ಶಿ ಹೂಲೆಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ,  ಹಿರಿಯ ವಕೀಲರಾದ  ಬಿ. ಕೃಷ್ಣಮೂರ್ತಿ, ಪಿ. ಜಗದೀಶ್ ಗೌಡ, ಕೆ. ಜಗದಪ್ಪ, ಕೆ. ಚಂದ್ರಗೌಡ, ಬಿ.ರೇವನಗೌಡ, ಎಸ್.ಎಂ.ರುದ್ರಮನಿ, ಕೆ.ಎಂ. ಚಂದ್ರಮೌಳಿ, ಕೋಡಿಹಳ್ಳಿ ಪ್ರಕಾಶ್, ಕೆಂಗಳ್ಳಿ ಪ್ರಕಾಶ್, ಕೆ.ನಾಗರಾಜ್,  ವಿ.ಎಸ್.ಬಸವನಗೌಡ,  ಪ್ರಕಾಶ್, ಕೆ. ಸುರೇಶ್, ಎಂ. ಮೃತ್ಯುಂಜಯ, ಕೆ.ಎಸ್. ಮಂಜ್ಯಾ ನಾಯ್ಕ, ಡಿ. ಹನುಮಂತಪ್ಪ, ಬಾಗಳಿ ಮಂಜುನಾಥ್, ನಂದೀಶ್, ಮುತ್ತಿಗಿ ಮಂಜುನಾಥ್, ರೇವಣಸಿದ್ದಪ್ಪ, ಜಾಕೀರ್, ಬಸವರಾಜ್,  ಕೇಶವಮೂರ್ತಿ, ಸಿ. ರಾಜಪ್ಪ,  ಹಾಲೇಶ್, ತಿಪ್ಪೇಶ್, ಸಿದ್ದೇಶ್, ಕಂಡ್ಯಪ್ಪ, ಬಸವರಾಜ್ ಸೇರಿದಂತೆ ಇತರರು ಇದ್ದರು.

error: Content is protected !!