ನಗರದಲ್ಲಿ ಕ್ಷೀರ ಸಾಗರ ಮಂಥನ ಪ್ರದರ್ಶನ

ನಗರದಲ್ಲಿ ಕ್ಷೀರ ಸಾಗರ ಮಂಥನ ಪ್ರದರ್ಶನ

ಎಸ್.ಕೆ.ಪಿ. ದೇವಸ್ಥಾನ ರಸ್ತೆಯ ವಾಸವಿ ಯುವಜನ ಸಂಘದಿಂದ 42ನೇ ವಿನಾಯಕ ಮಹೋತ್ಸವದ ಪ್ರಯುಕ್ತ ಕ್ಷೀರ ಸಾಗರ ಮಂಥನ (ಸಮುದ್ರ ಮಂಥನ) ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಸುನೀಲ್ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ವಿಘ್ನೇಶ್ವರ ಸ್ವಾಮಿಯ ಪ್ರತಿಷ್ಟಾಪನೆ ನಡೆಯಲಿದೆ. 

ಕ್ಷೀರ ಸಾಗರ ಮಂಥನದ ಪ್ರದರ್ಶನವು ಇಂದಿನಿಂದ ಇದೇ ದಿನಾಂಕ  24 ರವರೆಗೆ ಪ್ರತಿದಿನ ಸಂಜೆ 5.30 ರಿಂದ 9ರವರೆಗೆ ಶ್ರೀ ಕಾಸಲ್ ವಿಠ್ಠಲ್ ಶ್ರೀಮತಿ ಸುನಂದಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಕ್ಷೀರಸಾಗರ ಮಂಥನದ ಸಾಹಿತ್ಯವನ್ನು ರಚಿಸಿ ಧ್ವನಿ ನೀಡಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಆರ್.ಎನ್.ಅಜಿತ್ ತಿಳಿಸಿದ್ದಾರೆ.

error: Content is protected !!