ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯಲ್ಲಿ ಕೆವಿಕೆಯಿಂದ ಪರಿಸರ ದಿನಾಚರಣೆ

ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯಲ್ಲಿ  ಕೆವಿಕೆಯಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ.6- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ  ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಆಚರಿಸಲಾಯಿತು.   

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ  ಮುಖ್ಯಸ್ಥ  ಡಾ. ಟಿ. ಎನ್. ದೇವರಾಜ್ ಅವರು, ಪ್ಲಾಸ್ಟಿಕ್ ಬಳಕೆ ಪ್ರಪಂಚದಾದ್ಯಂತ ಮಾನವರ ಆರೋಗ್ಯದ  ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಜಲ, ಭೂಮಿ ಮತ್ತು ವಾಯು ಸಂಪೂರ್ಣವಾಗಿ ಕಲ್ಮಶವಾಗುತ್ತಿದ್ದು, ಆಹಾರ ಸರಪಳಿಯಲ್ಲಿಯೂ ಇದರ ಬಳಕೆ ಹೆಚ್ಚಾಗಿ ಅನೇಕ ರೋಗ ರುಜಿನಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು. 

ಕಾರ್ಯಕ್ರಮವನ್ನು  ಉದ್ಘಾಟಿಸಿದ ಶ್ರೀ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ  ಕೆ. ಶಿವಮೂರ್ತಿ,  ಪರಿಸರದ ಬಗ್ಗೆ ಜಾಗೃತಿ ವಿದ್ಯಾರ್ಥಿಗಳ ಮಟ್ಟದಲ್ಲೇ ಪ್ರಾರಂಭವಾಗಬೇಕು, ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ದೃಢ ನಿರ್ಧಾರವನ್ನು ಯುವ ಜನತೆ ಮಾಡಬೇಕೆಂದರು.

ಬೇಸಾಯ ಶಾಸ್ತ್ರ ತಜ್ಞ ಮಲ್ಲಿಕಾರ್ಜುನ್ ಬಿ.ಓ. ಪ್ರಾಸ್ತಾವಿಕವಾಗಿ ಮಾತನಾಡಿದರು,  ಡಾ ಜಯದೇವಪ್ಪ ಜಿ. ಕೆ.   ಸ್ವಾಗತಿಸಿದರು, ಸಣ್ಣಗೌಡ್ರ ಎಚ್. ಎಂ.   ವಂದಿಸಿದರು.  ರಘುರಾಜ ಜೆ. ಕಾರ್ಯಕ್ರಮ ನಿರೂಪಿಸಿದರು.  

error: Content is protected !!