ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆ: ಹರಿಹರದ ಬ್ರದರ್ ಜಿಮ್‌ಗೆ 4 ಚಿನ್ನ, 7 ಬೆಳ್ಳಿ, 5 ಕಂಚು ಸೇರಿ 16 ಪದಕಗಳು

ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆ: ಹರಿಹರದ ಬ್ರದರ್  ಜಿಮ್‌ಗೆ  4 ಚಿನ್ನ, 7 ಬೆಳ್ಳಿ, 5 ಕಂಚು ಸೇರಿ 16 ಪದಕಗಳು

ದಾವಣಗೆರೆ, ಜೂ. 1-   ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿ ಕಳೆದ ವಾರ ಜರುಗಿದ 45ನೇ ರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಯಲ್ಲಿ ಹರಿಹರ ಬ್ರದರ್ ಜಿಮ್‌ನ ಕ್ರೀಡಾಪಟುಗಳು  4 ಚಿನ್ನದ ಪದಕ, 7 ಬೆಳ್ಳಿಯ ಪದಕ, 5 ಕಂಚಿನ ಪದಕ ಸೇರಿದಂತೆ, ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಸ್ಪರ್ಧೆಗಳಲ್ಲಿ 21 ರಾಜ್ಯಗಳಿಂದ ಸುಮಾರು 850 ಜನ  ಸ್ಪರ್ಧಾಳು ಗಳು ಭಾಗವಹಿಸಿದ್ದು, ಹರಿಹರದ ಬ್ರದರ್ ಜಿಮ್‌ನ 30 ಕ್ರೀಡಾಪಟುಗಳು   ರಾಜ್ಯವನ್ನು ಪ್ರತಿನಿಧಿಸಿದ್ದರು. ಇವರಲ್ಲಿ 4 ಜನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳಿಗೆ ಆಯ್ಕೆಯಾ ಗಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಹರಿಹರ ಬ್ರದರ್ ಜಿಮ್‌ನ ಸಂಚಾಲಕ  ಅಕ್ರಂ ಬಾಷಾ,  ತರಬೇತುದಾರ ಮೊಹಮ್ಮದ್ ರಫೀಕ್ ಅಭಿನಂದಿಸಿದ್ದಾರೆ.

error: Content is protected !!