ಮಲೇಬೆನ್ನೂರು : ಎಇಇ ಚಂದ್ರಕಾಂತ್‌ ವಯೋನಿವೃತ್ತಿ, ಬೀಳ್ಕೊಡುಗೆ

ಮಲೇಬೆನ್ನೂರು : ಎಇಇ ಚಂದ್ರಕಾಂತ್‌ ವಯೋನಿವೃತ್ತಿ, ಬೀಳ್ಕೊಡುಗೆ

ಮಲೇಬೆನ್ನೂರು, ಜೂ. 1 – ಇಲ್ಲಿನ ಭದ್ರಾ ನಾಲಾ ನಂ.3 ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಕಾಂತ್‌ ಅವರು ಬುಧವಾರ ಸೇವೆಯಿಂದ ವಯೋ ನಿವೃತ್ತರಾದರು.

ಈ ನಿಮಿತ್ತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಂದ್ರಕಾಂತ್‌ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ವೇಳೆ ಮಾತನಾಡಿದ ಭದ್ರಾ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಜಿ.ಎಸ್‌. ಪಟೇಲ್‌ ಅವರು ರೈತರ ಬೆಳೆಗಳಿಗೆ ನೀರು ಒದಗಿಸುವ ಈ ಸೇವೆ ಅವಿಸ್ಮರಣೀಯವಾದದ್ದು, ರೈತರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಂಡರೆ, ರೈತರು ಸದಾ ನಮ್ಮನ್ನು ಸ್ಮರಿಸುತ್ತಾರೆ ಎಂಬುದಕ್ಕೆ ಚಂದ್ರಕಾಂತ್‌ ಸಾಕ್ಷಿಯಾಗಿದ್ದಾರೆ ಎಂದರು.

ಕಛೇರಿಯ ಸಿಬ್ಬಂದಿಗಳಾದ ಹಚ್‌. ಆಂಜನೇಯ, ಟಿ.ಬಿ. ಮಂಜುನಾಥ್‌ ಸಿ.ರಾಜು, ಲಕ್ಷ್ಮಿ ವಿ. ಆಚಾರ್ಯ, ಚಂದ್ರಪ್ಪ ಓಲೆಕಾರ್, ಸಹಾಯಕ ಇಂಜಿನಿಯರ್‌ಗಳಾದ ಧನಂಜಯ, ಡಿ.ರಾಜು, ರೆಹಮಾನ್‌ ಸಾಬ್‌, ಶ್ವೇತಾ, ಕಛೇರಿ ಅಧೀಕ್ಷಕಿ ಮಂಜುಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!